ಬಂಟ್ವಾಳ: ಪುದು ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ರಮ್ಲಾನ್ ಮಾರಿಪಳ್ಳ ಆಯ್ಕೆಯಾಗಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಅವರ ಸೂಚನೆಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಅವರ ಶಿಫಾರಸ್ಸಿನಂತೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಈ ಆದೇಶ ಹೊರಡಿಸಿದ್ದಾರೆ. ಪುದು ಗ್ರಾ.ಪಂ.ಸದಸ್ಯರಾಗಿರುವ ಇವರು ತನ್ನ ಜನಪರ ಕಾರ್ಯಗಳ ಗುರುತಿಸಿಕೊಂಡಿದ್ದಾರೆ.

