ಉಡುಪಿ: ಮಣಿಪಾಲ ಕೆ.ಎಂ.ಸಿ ರಕ್ತನಿಧಿ ಕೇಂದ್ರ,ಸರ್ಕಾರಿ ಪ್ರ.ದ ಕಾಲೇಜು ಕಾಪು ಎನ್.ಎಸ್.ಎಸ್ ರೋವರ್ಸ್ ರೇಂಜರ್ಸ್ ಮತ್ತು ಕಾಪು ಜೇಸಿಐ ಇದರ ವತಿಯಿಂದ ಕೆ.ಎಂ.ಸಿ ಯಲ್ಲಿ ಆ.26 ರಂದು ಜೇಸಿಐ ಭಾರತದ ರಾಷ್ಟಿಯ ಅದ್ಯಕ್ಷ ರಾಮ್‍ಕುಮಾರ್ ಮೆನನ್ ಇವರ ಹುಟ್ಟುಹಬ್ಬದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಜೇಸಿ ವಲಯಾದ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ ರಕ್ರದಾನದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮ ನಿರ್ಧೇಶಕರ ಅನಿಲ್ ಕುಮಾರ್,ಡಾ:ಮನೀಶ್,ಉಪನ್ಯಾಸಕರಾದ ವಿದ್ಯಾ ಡಿ,ವಿದ್ಯಾ ಕೆ.ಯು,ಕಾಪು ಜೇಸಿ ಅದ್ಯಕ್ಷ ಸಂದೀಪ್ ಶೆಟ್ಟಿ,ಕಾರ್ಯದರ್ಶಿ ರಮೇಶ್ ನಾಯ್ಕ,ವಿಶ್ವೇಶ ಆಚಾರ್ಯ ಮುಂತಾದವರಿದ್ದರು.ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
