ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕ ಸಂಚಾಲಿತ ನರಿಕೊಂಬುಕೊಪ್ಪಲಕೋಡಿ ಎಂಬಲ್ಲಿ ಸರಸ್ವತಿ ಶಿಶುಮಂದಿರದ ನೂತನಕಟ್ಟಡವನ್ನು ದಿನಾಂಕ 24.08.2017ರಂದು ಶ್ರೀ ಪದ್ಮನಾಭರೆಡ್ಡಿ, ಬೆಂಗಳೂರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಇವರು ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದಅವರುನನ್ನ 30 ವರ್ಷದರಾಜಕೀಯಜೀವನದಲ್ಲಿ ಇವತ್ತಿನಅತ್ಯಂತ ಸಂತಸ ದಿನವಾಗಿದೆ.ಈ ಶಾಲೆಯನ್ನುಕಂಡುತುಂಬಾಆಶ್ಚರ್ಯಚಕಿತನಾದೆ.ಇಂತಹ ಸಂಸ್ಥೆಗಳು ರಾಜ್ಯದಾದ್ಯಂತಆಗಬೇಕಾಗಿದೆ.ಆಗ ಯಾವುದೇ ಸಮಸ್ಯೆಇರುವುದಿಲ್ಲ. ಇಲ್ಲಿ ಮಕ್ಕಳಿಗಾಗಿ ಶಿಕ್ಷಣ ಕೇಂದ್ರಇದೆಆದರೆ ಹಿರಿಯ ನಾಗರಿಕರಿಗೂ ಶಿಕ್ಷಣವನ್ನು ಕೇಂದ್ರಇರಬೇಕುಅಂದರೆರಾಜ್ಯದ ಸಚಿವರಿಗೆ ಈ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಕ್ಷಣ ಕೊಡಬೇಕುಎಂದು ಹೇಳಿದರು.
ಡಾ. ಪ್ರಭಾಕರ ಭಟ್‍ಯಾವುದೇ ಪ್ರಚಾರಕ್ಕಾಗಿದೇಶಸೇವೆ ಮಾಡ್ತಾಇಲ್ಲದೇಶಕ್ಕಾಗಿದೇಶ ಸೇವೆ ಮಾಡ್ತಾಇದ್ದಾರೆ.ಭವ್ಯ ಭಾರತ ರೂಪುಗೊಳ್ಳುವ ಈ ಶಾಲೆಯ ಮಕ್ಕಳ ಅನ್ನ ಸರಕಾರಕಿತ್ತುಕೊಂಡದ್ದುಅಕ್ಷಮ್ಯಅಪರಾದ.ಈ ಸಂದರ್ಭದಲ್ಲಿಅವರೊಬ್ಬರಲ್ಲಅವರೊಟ್ಟಿಗೆ ಸಂಘ ಇದೆ, ಸಮಾಜಇದೆಯಾರಿಗೂಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದುಅವರು ಹೇಳಿದರು.

DSCN8339
ಶ್ರೀಧರ ಸಾಗರ,ರಾಷ್ಟ್ರೀಯಸೇವಾ ಭಾರತಿ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರು, ಮಾತನಾಡಿಮಗು ಮನೆ ಮನದ ದೀಪ, ಜಗತನ್ನು ಬೆಳಗುವ ಸಾಮಥ್ರ್ಯಇರುವ ಮಗುವಿಗೆ ಪ್ರೀತಿ ಮತ್ತು ವಿಶ್ವಾಸ ನೀಡಿದರೆ ಮುಂದೆದೊಡ್ಡವರಾಗುವಾಗಆತ್ಮ ವಿಶ್ವಾಸ ಬೆಳೆಯುತ್ತದೆ. ಸಮಾಜದಿಂದಎದುರಾಗುವ ಸಮಸ್ಯೆಯನ್ನು ಎದುರಿಸಿ ನಿಲ್ಲುತ್ತವೆ. ಮಗುವಿಗೆ ಸಮಗ್ರ ಶಿಕ್ಷಣ ನೀಡಿ ವಿಕಾಸ ಹೊಂದಬೇಕು.ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು.ಶಿಕ್ಷಣದಲ್ಲಿ ಮಗುವಿಗೆ ಯಾವುದೇಒತ್ತಡಇರಬಾರದು.ಶಾಲೆ ಮನೆಯಂತಿರಬೇಕು ಮನೆ ಶಾಲೆಯಂತಿರಬೇಕು.ಚಿಕ್ಕ ಮಗುವಿನಲ್ಲಿ ಹುಟ್ಟುವಾಗಲೇ ಸಂವೇದನಾಶೀಲತೆಯ ಗುಣಅಡಕವಾಗಿರುತ್ತದೆಎಂದು ತಿಳಿಸಿದರು.
ಪ್ರಶಾಂತ ಬಿ.ಎಸ್.,ಅಧ್ಯಕ್ಷರು ಮೈಸೂರುಟ್ರಾವೆಲ್ಸ್ ಎಸೋಸಿಯೇಟ್ಸ್ ಇವರು ಮಾತನಾಡಿ ಈ ಶಿಕ್ಷಣದಿಂದ ವಂಚಿತರಾಗಿ ನೊಂದುಕೊಳ್ಳುತ್ತಿದ್ದೇನೆ. ನಶಿಸಿ ಹೋಗುತ್ತಿರುವ ಸಂಸ್ಕøತಿ ಪುನಃ ಬರಬೇಕಾದರೆಇಂತಹ ಶಿಕ್ಷಣ ಸಂಸ್ಥೆಗಳು ಅಲ್ಲಲ್ಲಿ ಪ್ರಾರಂಭವಾಗಬೇಕುಎಂದುಅಭಿಪ್ರಾಯಪಟ್ಟರು.
ಕಟ್ಟಡದ ಪೂರ್ಣ ಜವಾಬ್ಧಾರಿವಹಿಸಿಕೊಂಡಿರುವ ಗೋಪಿನಾಥ ಶೆಣೈಯವರಿಗೆ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿಉದ್ಯಮಿಗಳಾದ ಗಣೇಶ್ ಸೋಮಯಾಜಿ, ಎರಕಳ, ರಘುನಾಥ ಸೋಮಯಾಜಿ, ಎರಕಳ, ವೀರೇಶ್‍ಕುಮಾರ್ ಬೆಂಗಳೂರು, ರಾಜಗೋಪಾಲ ಬೆಂಗಳೂರು, ದಿಲೀಪ್‍ಕುಮಾರ್ ಬೆಂಗಳೂರು, ಭಗಿನಿ ಸಾವಿತ್ರಿ, ಗೋಳ್ತಮಜಲು ಜಿಲ್ಲಾ ಪಂಚಾಯತ್ ಸದಸ್ಯೆಕಮಾಲಾಕ್ಷಿ ಪೂಜಾರಿ, ಗ್ರಾಮ ಪಂಚಾಯತ್‍ಅಧ್ಯಕ್ಷಯಶೋಧರಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರುಡಾ.ಪ್ರಭಾಕರ ಭಟ್ ಪ್ರಸಾವಿಕವಾಗಿ ಮಾತನಾಡಿ ಶಿಶುಮಂದಿರ ಶಿಕ್ಷಣದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಅಧ್ಯಕ್ಷರು ನಾರಾಯಣ ಸೋಮಯಾಜಿ,ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾಗೇಶ್‍ಕಲ್ಲಡ್ಕ, ಶಿಶುಮಂದಿರ ಮಾತಾಜಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಧಾ ಸೂರ್ಯ ಭಟ್‍ನಿರೂಪಿಸಿ, ಶಿಶುಮಂದಿರದ ಆಡಳಿತ ಮಂಡಳಿ ಸದಸ್ಯರಾದ ಪ್ರವೀಣ ಸ್ವಾಗತಿಸಿ ಗ್ರಾಮ ಪಂಚಾಯತ್ ಸದಸ್ಯ ದಿವಾಕರ ವಂದಿಸಿದರು.

By suddi9

Leave a Reply

Your email address will not be published. Required fields are marked *