ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು,ಬಂಟ್ವಾಳ ಇದರ ವತಿಯಿಂದ ನಡೆಯುವ 14 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಅಗಸ್ಟ್ 25 ರಿಂದ 29 ರವರೆಗೆ ಬಂಟ್ವಾಳ ಜಕ್ರಬೆಟ್ಟುವಿನ ದಾಸ ರೈ ಮೈದಾನದಲ್ಲಿ ಜರಗಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ಗಣೇಶೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ ಧಾರ್ಮಿಕ ಸಭೆ,ಸಾಂಸ್ಕ್ರತಿಕ ಕಾರ್ಯಕ್ರಮಗಳ ನಡೆಯಲಿವೆ. ನಿರಂತರ ಅನ್ನಸಂತರ್ಪಣೆಯು ನಡೆಯುವುದು. 25ರಂದು ಸಚಿವ ರಮಾನಾಥ ರೈ ಅವರು ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಧಾರ್ಮಿಕ ಸಭೆಯಲ್ಲಿ ವಿವಿಧ ಮಠಾಧಿಪತಿಗಳು, ಶಾಸಕರುಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಉದ್ಯಮಿಗಳು ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಅ.27ರಂದು ಮಹಿಳೆಯರಿಂದ ಕುಂಕುಮಾರ್ಚನೆಯ ವಿಶೇಷ ಪೂಜೆ, ಹಗ್ಗಜಗ್ಗಾಟ ಸಹಿತ ವಿವಿಧ ಸ್ಪರ್ಧೆಗಳು ಜರಗಲಿದೆ. 29 ರಂದು 108 ತೆಂಗಿನಕಾಯಿ ಗಣಹೋಮ ನಡೆಯಲಿದ್ದು, ಸಂಜೆ ಶ್ರೀ ವಿನಾಯಕನ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

 

By suddi9

Leave a Reply

Your email address will not be published. Required fields are marked *