ಪೊಳಲಿ: ಸದಾ ಕಾರ್ಯಚಟುವಟಿಕೆಗಳ ಮೂಲಕ ಹೆಸರಾಗಿರುವ ರಾಮಕೃಷ್ಣ ತಪೋವದಲ್ಲಿ 3 ದಿನಗಳ ಕಾಲ ಶ್ರೀ ಕೃಷ್ಣ ಜನ್ಮಾಸ್ಟಮಿಯನ್ನು ಆಚರಿಸಲಾಗುತ್ತಿದ್ದು ನಿನ್ನೆ ಅಗಸ್ಟ 14ರಂದು, ರಾಮಕೃಷ್ಣ ತಪೋವನದ ಪೂಜ್ಯ ಸ್ವಾಮಿ ವಿವೇಕಚೈತನ್ಯಾನಂದರು ಬಾಲಕೃಷ್ಣನ ವಿಗ್ರಹಕ್ಕೆ ವಿವಿಧ ದ್ರವ್ಯಗಳ ಅಭಿಷೇಕ ನಡೆಸಿ ಸಂಪನ್ನರಾದರು, ಜೊತೆಯಲ್ಲಿ ಭಕ್ತಾದಿಗಳು ಸಹಾ ಶ್ರೀ ಕೃಷ್ಣನಿಗೆ ತುಳಸಿಯ ಅರ್ಚನೆ ಮಾಡಿ ಪುನೀತರಾದರು. ಚಿಕ್ಕಪುಟ್ಟ ಕಂದಮ್ಮಗಳ ಕೃಷ್ಣವೇಷ ಸ್ಪರ್ದೆಯ ನೋಡುಗರ ಕಣ್ಮನ ಸೆಳೆಯುತ್ತಿದ್ದುದು ವಿಷೇಶವಾಗಿತ್ತು.



