ಕುಪ್ಪೆಪದವು : ದ. ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು, ದಕ್ಷಿಣ ವಲಯ ಮತ್ತು ಸರಕಾರಿ ಪ್ರೌಢಶಾಲೆ ಕಲ್ಲಾಡಿ, ಕುಪ್ಪೆಪದವು ಇವರ ಜಂಟೀ ಆಶ್ರಯದಲ್ಲಿ ಗುರುಪುರ ಹೋಬಳಿ ಮಟ್ಟದ ಪ್ರೌಢಶಾಲೆಗಳ ಖೋ ಖೋ ಪಂದ್ಯಾಟವು ಕುಪ್ಪೆಪದವು ಅರಮನೆ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಿತು.
ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ದೀಪ ಬೆಳಗಿಸಿ ಪಂದ್ಯಾಟವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

1Kuppepadavu 1 1Kuppepadavu 2 1Kuppepadavu 3ಎಡಪದವು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ನೀಲಯ್ಯ ಎಂ. ಅಗರಿ, ಗ್ರಾಮ ಪಂಚಾಯತ್ ಸದಸ್ಯರಾದ ಹಿರಣ್ಯಾಕ್ಷ ಕೋಟ್ಯಾನ್, ಮಹಮ್ಮದ್ ಶರೀಫ್ ಕಜೆ, ಶ್ರೀಮತಿ ವಸಂತಿ, ಕಲ್ಲಾಡಿ ಪ್ರೌಢಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯ ಬಿ. ಎ. ಅಬೂಬಕ್ಕರ್, ಕುಪ್ಪೆಪದವು ಪ್ರೌಢ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಉಮರಬ್ಬ, ಕಲ್ಲಾಡಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ, ಕುಪ್ಪೆಪದವು ಶಾಲಾ ಮುಖ್ಯ ಶಿಕ್ಷಕ ಮಾರ್ಕ್ ಜೆ. ಮೆಂಡೋನ್ಸ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗುರುನಾಥ ಬಾಗೇವಾಡಿ ಹಾಜರಿದ್ದರು. ಗುರುಪುರ ಹೋಬಳಿ ಮಟ್ಟದ ಪ್ರೌಢ ಶಾಲೆಗಳ 14 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ಕಿನ್ನಿಕಂಬಳ ಪ್ರೌಢಶಾಲೆ ಪ್ರಥಮ ಮತ್ತು ನಿರಂಜನ ಸ್ವಾಮಿ ಪ್ರೌಢ ಶಾಲೆ ಸುಂಕದಕಟ್ಟೆ ದ್ವಿತೀಯ ಸ್ಥಾನ ಪಡೆಯಿತು. ಉತ್ತಮ ಹಿಡಿತಗಾರ ವಿಭಾಗದಲ್ಲಿ ಬಾಲಕರಲ್ಲಿ ಕಿನ್ನಿಕಂಬಳ ಪ್ರೌಢಶಾಲೆಯ ಸಂಪತ್ ಮತ್ತು ಬಾಲಕಿಯರ ವಿಭಾಗದಲ್ಲಿ ನಿರಂಜನ ಸ್ವಾಮಿ ಪ್ರೌಢ ಶಾಲೆಯ ಕು. ದೀಕ್ಷಾ ಪ್ರಥಮ ಸ್ಥಾನ ಪಡೆದರೆ, ಉತ್ತಮ ರಕ್ಷಣೆ ವಿಭಾಗದಲ್ಲಿ ಬಾಲಕರಲ್ಲಿ ನಿರಂಜನ ಸ್ವಾಮಿ ಪ್ರೌಢ ಶಾಲೆಯ ಹನುಮಂತಪ್ಪ ಮತ್ತು ಬಾಲಕಿಯರ ವಿಭಾಗದಲ್ಲಿ ಮುತ್ತೂರು ಪ್ರೌಢಶಾಲೆಯ ಕು. ಜೀವಿತಾ ಪ್ರಥಮ ಸ್ಥಾನಿಯಾದರು.

By suddi9

Leave a Reply

Your email address will not be published. Required fields are marked *