ಪೊಳಲಿ : ಭಗವಂತನ ಸಾನಿಧ್ಯವಿದ್ದಾಗ ಯಾವುದೇ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿಪದಾನಂದಾಜಿ ಮಹರಾಜ್ ಹೇಳಿದರು. ಅವರು ಪೊಳಲಿಯ ರಾಮಕರಷ್ಣ ತಪೋವನದಲ್ಲಿ ಭಾನುವಾರ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ರ ಭಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಭಗವಾನ್ ಶ್ರೀ ಕ್ರಷ್ಣನ ಆದರ್ಶ ಇಂದಿನ ಜನರಿಗೆಅವಶ್ಯಕವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮತ್ತೊರ್ವ ಸ್ವಾಮಿ ಸುಖಾತ್ಮನಂದಾಜಿ ಮಾತನಾಡಿ ಭಾರತೀಯ ಪರಂಪರೆಯ ಪ್ರತಿಯೊಂದು ಆಚರಣೆಗಳು ಪ್ರಮುಖವಾಗಿದ್ದು ನಮಗೆ ಅದರ ಅರಿವಿಲ್ಲದಂತಾಗಿದೆ. ಎಂದರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ಮತ್ತಿತರರು ಉಪಸ್ಥಿತರಿದ್ದರು.
ಪೊಳಲಿ ರಾಜರಾಜೇಶ್ವರಿ ಭಜನಾಮಂಡಳಿಯವರಿಂದ ಭಜನೆ ಪ್ರಾರಂಭಗೊಂಡಿತು ಭಜನಾ ಸಂಕೀರ್ತನೆಯಲ್ಲಿ ನಾನಾ ಭಜನಾ ಮಂಡಳಿಗಳು ಭಾಗವಹಿಸಲಿದೆ ಎಂದು ಸ್ವಾಮಿ ವಿವೇಕಚೈತನ್ಯಾನಂದ ಅವರು ತಿಳಿಸಿದರು.



