ಬಂಟ್ವಾಳ: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯ ನೆಪದಲ್ಲಿ ಅಮಾಯಕರನ್ನು ಅಕ್ರಮ ಬಂಧನದಲ್ಲಿರಿಸಲಾಗುತ್ತಿದೆ ಎಂದು ಆರೋಪಿಸಿ ಬಂಟ್ವಾಳ ನಗರ ಠಾಣೆಗೆ ಎಸ್.ಡಿ ಪಿ.ಐ. ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆಂಬ ಮಾಹಿತಿಯ ಹಿನ್ನಲೆಯಲ್ಲಿ ಶನಿವಾರ ಬಂಟ್ವಾಳದಾದ್ಯಂತ ಪೊಲೀಸ್ ಬಂದೋಬಸ್ತ್ ನ್ನು ಬಿಗುಗೊಳಿಸಿದ ಪ್ರಸಂಗ ನಡೆದಿದೆ.12bhsp - Copy

ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರೇ ಬಂಟ್ವಾಳ ನಗರ ಠಾಣೆಗಾಗಮಿಸಿ ಬಂದೋಬಸ್ತ್ ಗೆ ನಿರ್ದೇಶನ ನೀಡಿದರು. ಹೆಚ್ಚುವರಿಯಾಗಿ ಹೊರಜಿಲ್ಲೆಯಿಂದ ಬಂದು ಸದ್ಯ ಇಲ್ಲೆ ಮೊಕ್ಕಾಂ ಹೂಡಿರುವ  ಪೊಲೀಸ್ ಸಿಬ್ಬಂದಿಗಳನ್ನು ಅಯಕಟ್ಟಿನಲ್ಲಿ ನಿಯೋಜಿಸಲಾಗಿತ್ತು.ಪರಿಸ್ಥಿತಿ ಸಂಪೂರ್ಣ ಸಹಜಸ್ಥತಿಯಲ್ಲಿರುವ ಬಿ.ಸಿ.ರೋಡಿನಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಹಠಾತ್ತನೇ ಪೊಲೀಸ್ ಸಿಬ್ಬಂದಿಗಳನ್ನು ರಸ್ತೆಗಿಳಿಸಿದ್ದು ,ಒಂದೊಮ್ಮೆ ಸಾರ್ವಜನಿಕರು ಕೂಡ ಕಕ್ಕಾಬಿಕ್ಕಿಯಾದರು.

ಕೆಲವರು ಮಾಧ್ಯಮ ಪ್ರತಿನಿಧಿಗಳಿಗೂ ಪೋನಾಯಿಸಿ ವಿಚಾರಿಸಿದರು.ಆದರೆ ಪೊಲೀಸ್ ಅಧಿಕಾರಿಗಳು ಮಾತ್ರ ಎನನ್ನು ಬಾಯಿಬಿಡಲಿಲ್ಲ. ಕೊನೆಗೆ ಶರತ್ ಹತ್ಯೆಗೆ ಸಂಬಂಧಿಸಿ ವಿಚಾರಣೆ ನೆಪದಲ್ಲಿ ಪೊಲೀಸರು ಅಮಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ.ಇದರ ವಿರುದ್ದ ಎಸ್ ಡಿ ಪಿ ಐ ಸಂಘಟನೆ ಮುತ್ತಿಗೆ ಹಾಕಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿದ ವದಂತಿಯ ಹಿನ್ನಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಯಾರೊಬ್ಬರು ಕೂಡ ಠಾಣೆಗೆ ಮುತ್ತಿಗೆ ಬಿಡಿ ಅತ್ತ ಸುಳಿಯಲೇ ಇಲ್ಲ. ಈ ವದಂತಿಯಿಂದ ಪೊಲೀಸರು ಮತ್ತೊಮ್ಮೆ ಎಲರ್ಟ್ ಅಗುವಂತಾಯಿತು. ಸದ್ಯದ ಮಟ್ಟಿಗೆ ತಾಲೂಕಿನಲ್ಲಿ ನಿಷೇದಾಜ್ನೆ,ನಿರ್ಬಂಧಕಾದ ಮುಕ್ಕವಾಗಿದ್ದರು. ಹೊರಜಿಲ್ಲೆಯಿಂದ ಬಂದೋಬಸ್ತ್ ಗಾಗಿ ಬಂದಿರುವ ಹೆಚ್ಚುವರಿ ಒಂದಷ್ಟು ಪೊಲೀಸ್ ಸಿಬ್ಬಂದಿಗಳು ಇನ್ನೂ ಇಲ್ಲೆ ಮೊಕ್ಕಾಂ ಹೂಡಿದ್ದಾರೆ.

ಮುಂದಿನವಾರ ವಿವಿದೆಡೆಯಲ್ಲಿ ಕ್ರಷ್ಣಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ,ಬಳಿಕ ಗಣೇಶೋತ್ಸವ ನಡೆಯಲಿರುವುದರಿಂದ ಇವೆಲ್ಲವನ್ನು ಮುಗಿಸಿಯೇ ಊರಿನತ್ತ ತೆರಳಬೇಕಾಗಿದೆ.ಕಳೆದೆರಡೂವರೆ ತಂಗಳಿನಿಂದ ಬಂದೋಬಸ್ತ್ ಗಾಗಿ ಹೊರಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಗಳು ಬಂದು ಇಲ್ಲಿ ಬಂದು ತಂಗಿದ್ದು,ಕೆಲವರು ತಮ್ಮ ಜಿಲ್ಲೆಗೆ ತೆರಳಿದ್ದರೆ ಇದಕ್ಕೆ ಬದಲಿಯಾಗಿ ಸಿಬ್ಬಂದಿಗಳು ಬಂದಿದ್ದಾರೆ.ಒಟ್ಟಾರೆ ಇವರಿಗೆ ಮಾತ್ರ ಮನೆಮಂದಿಯೊಂದಿಗೆ ಸೇರಿಕೊಂಡು ಹಬ್ಬ ಅಚರಿಸುವ ಭಾಗ್ಯವಿಲ್ಲ.

 

By Suddi9

Leave a Reply

Your email address will not be published. Required fields are marked *