ಬಂಟ್ವಾಳ: ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲಾ ಆವರಣದಲ್ಲಿ ಸರಸ್ವತಿ ಶಿಶು ಮಂದಿರ ಶೇಡಿಗುರಿ, ಶಂಭೂರು ಆಂಜನೇಯ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು 04.08.2017ನೇ ಆದಿತ್ಯವಾರದಂದು ನಡೆಯಿತು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲ್ಲಡ್ಕ ಪ್ರಾಥಮಿಕ ಶಾಲಾ ಮಾತಾಜಿ ರೂಪಕಲಾ ಅವರು ಆಷಾಡ ಮಾಸದಲ್ಲಿ ಬರುವ ವರಮಹಾಲಕ್ಷ್ಮೀ ವೃತ ಆಚರಣೆಯ ಮಹತ್ವವನ್ನು ಮಹಿಳೆಯರಿಗೆ ಹೇಳಿದರು.ಸಭಾದ್ಯಕ್ಷತೆಯನ್ನು ಸರಸ್ವತಿ ಶಿಶು ಮಂದಿರದ ಅದ್ಯಕ್ಷ ರಘಸಪಲ್ಯ ವಹಿಸಿದ್ದರು. ವಿರೋಧ ಪಕ್ಷದ ನಾಯಕರ ವಿಶೇಷ ಕರ್ತವ್ಯಾಧಿಕಾರಿ ಜಗನ್ನಾಥ ಬಂಗೇರ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕರ್ಬೆಟ್ಟು ಕೃಷ್ಣರಾಜ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶರೀಮತಿ ಸೌಮ್ಯ ಸ್ವಾಗತಿಸಿ , ಶೋಭಾ ಮಾತಾಜಿ ವಂದಿಸಿದರು. ಮೇಘಾರವರು ಕಾರ್ಯಕ್ರಮ ನಿರೂಪಿಸಿದರು
ಬಂಟ್ವಾಳ: ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ನೂತನ ಸಭಾ ವೇಧಿಕೆಯನ್ನು 04.08.2017ನೇ ಆದಿತ್ಯವಾರದಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ವಿಶೇಷ ಕರ್ತವ್ಯಾಧಿಕಾರಿ ಜಗನ್ನಾಥ ಬಂಗೇ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷರು, ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು

