ಗುರುಪುರ : ಗ್ರಾಮೀಣ ರಸ್ತೆಗಳು ಉದ್ದಾರವಾಗಿ ಗ್ರಾಮೀಣ ಭಾಗದ ಜನರ ಮುಖದಲ್ಲಿ ನಗು ಮೂಡುವಂತಾದರೆ ಅದುವೇ ನಮಗೆ ಆಶಿರ್ವಾದದಂತೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೋಹಿಯುದ್ದಿನ್ ಬಾವಾ ಹೇಳಿದರು 
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗುರುಪುರ ಬಂಡಸಾಲೆ ಚಿಲಿಂಬಿಗುಡ್ಡೆ ಸಂಪರ್ಕಿಸುವ ರಸ್ತೆಗೆ 2 ಕೋಟಿ 34 ಲಕ್ಷ ಅನುದಾನ ಮಂಜೂರುಗೊಳಿಸಿ ಅದೇ ರಸ್ತೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಹಳ್ಳಿಗಳ ರಸ್ತೆ ಅಭೀವೃದ್ಧಿ ಹೊಂದಿ ಹಳ್ಳಿಯ ಜನತೆಗೆ ಉಪಯೋಗವಾಗುವಂತಾದರೆ ಅದೇ ದೊಡ್ಡ ಆಶಿರ್ವಾದದಂತೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಯು.ಪಿ ಇಬ್ರಾಹಿಂ , ತಾ.ಪಂ ಸದಸ್ಯರಾದ ಸಚಿನ್ ಅಡಪ, ಗುರುಪುರ ಗ್ರಾಮ ಪಂಚಾಯತ್ ಅದ್ಯಕ್ಷೆ ರುಕಿಯಾ , ಉಪಾದ್ಯಕ್ಷ ಜಿ ಉದಯ್ ಭಟ್ , ಸದಸ್ಯೆಯರಾದ ಪದ್ಮಿನಿ ಅಂಚನ್, ಜಯಲಕ್ಷ್ಮಿ, ಸದಸ್ಯರಾದ ಹನೀಫ್ , ಸದಾಶಿವ ಶೆಟ್ಟಿ , ಅಹ್ಮದ್ ಬಾವಾ ,ಜಲೀಲ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುರೇಂದ್ರ ಕಂಬಳಿ, ವಿನಯ ಶೆಟ್ಟಿ . ಗುತ್ತಿಗೆದಾರರಾದ ಅಶೋಕ್ ಬಳಿ, ಸುಧಾಕರ್ ಶೆಟ್ಟಿ, ಇಂಜೀನಿಯರ್ ದಯಾನಂದ್ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು.
* ವೀಡಿಯೋ ನೋದಲು ಇಲ್ಲಿ ಕ್ಲಿಕ್ ಮಾಡಿ.



