ಗುರುಪುರ : ಗ್ರಾಮೀಣ ರಸ್ತೆಗಳು ಉತ್ತಮವಾಗಿ ರೂಪುಗೊಂಡು ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗುವಂತಾದಾಗ ಮಾತ್ರ ನೈಜ ಆದರ್ಶ ಗ್ರಾಮದ ಮಾದರಿಯಾಗಲು ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಹಿಯುದ್ದಿನ್ ಬಾವಾ ಹೇಳಿದರು12 addur kanjilkodi raste

12 kanjilkodi raste12-3

12-4

12-5
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಅಡ್ಡೂರು ಬಳಿಯ ಕಾಂಜಿಲಕೋಡಿ ಹಾಗೂ ನೂಯಿ ಸಂಪರ್ಕಿಸುವ ರಸ್ತೆಗೆ 1 ಕೊಟಿ 25 ಲಕ್ಷ ಅನುದಾನ ಮಂಜೂರುಗೊಳಿಸಿ ಅದೇ ರಸ್ತೆಯ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಹಳ್ಳಿಗಳ ರಸ್ತೆ ಅಭೀವೃದ್ಧಿ ಹೊಂದಿ ಹಳ್ಳಿಯ ಜನತೆಗೆ ಉಪಯೋಗವಾಗುವಂತಾದರೆ ಅದೇ ದೊಡ್ಡ ಆಶಿರ್ವಾದದಂತೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಯು.ಪಿ ಇಬ್ರಾಹಿಂ , ತಾ.ಪಂ ಸದಸ್ಯರಾದ ಸಚಿನ್ ಅಡಪ, ಗುರುಪುರ ಗ್ರಾಮ ಪಂಚಾಯತ್ ಅದ್ಯಕ್ಷೆ ರುಕಿಯಾ , ಉಪಾದ್ಯಕ್ಷ ಜಿ ಉದಯ್ ಭಟ್ , ಸದಸ್ಯೆ ಪದ್ಮಿನಿ ಅಂಚನ್,ಜಯಲಕ್ಷ್ಮಿ, ಸದಸ್ಯರಾದ ಹನೀಫ್ , ಸದಾಶಿವ ಶೆಟ್ಟಿ , ಅಹ್ಮದ್ ಬಾವಾ ,ಜಲೀಲ್, ಕೆಪಿಸಿಸಿ ಸದಸ್ಯರಾದ ಪೃಥ್ವಿರಾಜ್ ,ಗುರುಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ರವೀಂದ್ರ ಕಂಬಳಿ, ಯುವ ಕಾಂಗ್ರೆಸ್‍ನ ಮುಂದಾಳು ಗಿರೀಶ್ ಆಳ್ವಾ, ಗುತ್ತಿಗೆದಾರರಾದ ಸುಧಾಕರ್ ಶೆಟ್ಟಿ, ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *