ಅಡ್ಡೂರು: ಇತಿಹಾಸ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಾಲಯದ ಬಳಿಯಿರುವ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಾಲಯಕ್ಕೆ ಅರಣ್ಯ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. ದೇವಳದ ಅರ್ಚಕ ಚಂದ್ರಶೇಖರ್ ಭಟ್ ಪ್ರಸಾದ ನೀಡಿದರು.
ದೇವಳಕ್ಕೆ ಬರಲು ಅನುಕೂಲವಾಗುವಂತೆ ರಸ್ತೆಯನ್ನು ಮಾಡಲು ಸಚಿವರಿಗೆ ಮನವಿ ನೀಡಲಾಯಿತು. ಸಚಿವರೊಂದಿಗೆ ಪಕ್ಷದ ನಾಯಕರುಗಳಾದ ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಸಚಿನ್ ಅಡಪ, ಕೆಪಿಸಿಸಿ ಸದಸ್ಯರಾದ ಆರ್.ಕೆ ಪ್ರಥ್ವಿರಾಜ್ , ಕಂದಾವರ ಗ್ರಾ.ಪಂ. ಅಧ್ಯಕ್ಷೆ ವಿಜಯ ಗೋಪಾಲ್ ಸುವರ್ಣ, ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ ಉದಯ ಭಟ್, ಸದಸ್ಯೆ ಜಯಲಕ್ಷ್ಮಿ , ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ವಲಯದ ಯೂತ್ ಕಾಂಗ್ರೇಸ್ ಅಧ್ಯಕ್ಷ ಗಿರೀಶ್ ಆಳ್ವ, ಹಿಂದುಳಿದ ವರ್ಗದ ಗುರುಪುರ ಬ್ಲಾಕ್ ಅಧ್ಯಕ್ಷ ಗಣೇಶ್‍ಪೂಜಾರಿ, ಉಧ್ಯಮಿಗಲಾದ ಸತೀಶ್ಚಂದ್ರ ,ಚಂದ್ರಾಹಾಶ್ ಮತ್ತು ದೇವಾಲಯದ ಆಡಳಿತ ಮೊಕ್ತೇಸರರಾದ ನೂಯಿ ಬಾಲಕೃಷ್ಣ ರಾವ್ ,ಸುಭಾಸ್ ಉಪಸ್ಥಿತರಿದ್ದರು.
* ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.

