ಬಜ್ಪೆ: ಪೊಳಲಿಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ 19ನೇ ಜಿಲ್ಲಾ ಸಮ್ಮೇಳನದ ಮುನ್ನ ಭುವನೇಶ್ವರಿ ದೇವಿಯ ದಿಬ್ಬಣ ಪೊಳಲಿ ಸೇತುವೆಯಿಂದ ಸಮ್ಮೇಳನದ ನಡೆಯುವ ಸ್ಥಳವಾದ ಪೊಳಲಿ ದೇಗುಲದಲ್ಲಿ ಹಾಕಲಾದ ಪ್ರಾಂಗಣಕ್ಕೆ ತಲುಪಿತು. ಬೆಳಿಗ್ಗೆ ಎಂಟರ ಸುಮಾರಿಗೆ ಹೊರಟ ದಿಬ್ಬಣದ ಮೆರವಣಿಗೆಯನ್ನು ಜಿ.ಪಂ. ಸದಸ್ಯರಾದ ಜಯಶ್ರೀ ಕೆ.ಎ ಉದ್ಘಾಟಿಸಿದರು. ಪೊಳಲಿಯ ಅನುವಂಶಿಕ ಮೊಕ್ತೇಸರರಾದ ಚೇರ ಸೂರ್ಯನಾರಾಯಣ ರಾವ್ ಭುವನೇಶ್ವರಿಗೆ ದೇವಿಗೆ ಪುಷ್ಪಾರ್ಚನೆ ಮಾಡಿದರು. ತಾ.ಪಂ ಸದಸ್ಯರಾದ ಗುಣವತಿ ದೀಪ ಪ್ರಜ್ವಲಿಸಿದರು.
ಭುವನೇಶ್ವರಿಯನ್ನು ಪಲ್ಲಕಿಯ ಮೇಲೆ ಕುಳ್ಳಿರಿಸಿ ಮೆರವಣಿಗೆಯ ಮುಖಾಂತರ ತರಲಾಯ್ತು. ದೈತ್ಯ ಬೊಂಬೆಗಳು, ಕಲಶ ಹಿಡಿದುಕೊಂಡ ನಾರಿಯರು, ನಿಶಾನೆ, ಚೆಂಡೆವಾದನ, ಕರಗ ನೃತ್ಯ, ಕೀಲು ಕುದುರೆ, ಶಾಲಾ ಮಕ್ಕಳ ಸೈನ್ಯ, ಕನ್ನಡಾಸಕ್ತರ ದಂಡು ಮೆರವಣಿಗೆಯಲ್ಲಿ ಸಾಗಿಬಂದಿತು. ಜೊತೆಗೆ ಸಮ್ಮೇಳನದ ಸಂಘಟಕರು, ಸಾಹಿತಿಗಳು, ಚಿಂತಕರು, ವಿದ್ವಾಂಸರು, ಕಲಾಕಾರರು, ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.
DSC_0087

DSC_0035

DSC_0044

DSC_0046

DSC_0050

DSC_0064

DSC_0077

DSC_0125

DSC_0106

DSC_0111

DSC_0222

DSC_0152

DSC_0175

DSC_0182

DSC_0185

DSC_0202

 

By suddi9

Leave a Reply

Your email address will not be published. Required fields are marked *