ಬಂಟ್ವಾಳ:ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಶಾರದಾನಗರ ಮತ್ತು ಆಲಾಡಿ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಎಎಸ್ಪಿ ಡಾ.ಅರುಣ್ ನೇತೃತ್ವದ ಪೊಲೀಸರು ಸಹಿತ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಬಿ.ಕೆ.ಮೂತರ್ಿ ನೇತೃತ್ವದಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಅಕ್ರಮ ಮರಳು ಮತ್ತು ಲಾರಿ, ಜೆಸಿಬಿ, ಡ್ರೆಜ್ಜಿಂಗ್ ಯಂತ್ರ ಸಹಿತ ಐವರನ್ನು ಬಂಧಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಇಲ್ಲಿನ ನೇತ್ರಾವತಿ ನದಿಯಿಂದ ಮರಳು ಮೇಲೆತ್ತಿ ಅಕ್ರಮವಾಗಿ ಬೆಂಗಳೂರು ಮತ್ತಿತರ ಕಡೆಗೆ ಸಾಗಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಎಸ್ಪಿ ಡಾ.ಅರುಣ್ ನೇತೃತ್ವದ ಪೊಲೀಸರು ಸಹಿತ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಬಿ.ಕೆ.ಮೂತರ್ಿ ನೇತೃತ್ವದಲ್ಲಿ ಗುರುವಾರ ದಿನವಿಡೀ ಕಾಯರ್ಾಚರಣೆ ನಡೆಸಿದ್ದಾರೆ.
ಆರಂಭದಲ್ಲಿ ಇಲ್ಲಿನ ಆಲಾಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದೆ ಎನ್ನಲಾದ ಮರಳು ಅಡ್ಡೆಗೆ ದಾಳಿ ನಡೆಸಿ ಡ್ರೆಜ್ಜಿಂಗ್ ಯಂತ್ರ ಸಹಿತ ನಾಲ್ಕು ದೋಣಿ ಮತ್ತು ಹಿಟಾಚಿ ಮತ್ತಿತರ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದೆಡೆ ಸ್ಥಳೀಯ ಶಾರದಾನಗರ ಬಳಿ ಜೆಸಿಬಿ ಸಹಿತ ಎರಡು ಲಾರಿ ಮರಳು ಮತ್ತು ಐವರು ಚಾಲಕರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಮತ್ತು ಮರಳು ದಂಧೆ ನಡೆಸುತ್ತಿರುವ ಆರೋಪಿಗಳ ಬಗ್ಗೆ ವಿವರ ಸಂಗ್ರಹಿಸುವ ಕಾರ್ಯ ರಾತ್ರಿಯೂ ಮುಂದುವರಿದಿದೆ ಎಂದು ಎಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ.
ನಗರ ಠಾಣಾಧಿಕಾರಿ ಎ.ಕೆ.ರಕ್ಷಿತ್ ಗೌಡ ಮತ್ತಿತರ ಪೊಲೀಸರು ಕಾಯರ್ರಣೆಯಲ್ಲಿ ಪಾಲ್ಗೊಂಡಿದ್ದರು.
