ವಾಮಂಜೂರು: ಯುವಜನತೆದೇಶದಅಮೂಲ್ಯ ಸಂಪತ್ತು. ಸರ್ವ ಧರ್ಮಗಳ ಶಾಂತಿಯತೋಟವಾದ ಭಾರತದಲ್ಲಿ ಪರಸ್ಪರ ಸಹಿಷ್ಣುತೆ, ಸಹಬಾಳ್ವೆಯಿಂದ ಶಾಂತಿ, ಸೌಹಾರ್ಧತೆ ಸಾಧ್ಯ. ಸಂಸ್ಕಾರಯುತ ಶಿಕ್ಷಣ ಸದೃಢರಾಷ್ಟ್ರನಿರ್ಮಾಣಕ್ಕೆ ಪೂರಕಎಂದು, ಸ್ವಾಮಿ ವಿವೇಕಾನಂದ ಸೇವಾಸಂಸ್ಥೆ ಕಿನ್ನಿಗೋಳಿ ಇದರಅಧ್ಯಕ್ಷರಾದ ನಿಡ್ಡೋಡಿಚಾವಡಿಮನೆ ಶ್ರೀ ಜಗನ್ನಾಥ ಶೆಟ್ಟಿ ಕರೆನೀಡಿದರುSONY DSC.

ಇಲ್ಲಿನಸೈಂಟ್‍ರೈಮಂಡ್ಸ್ ಪದವಿ ಪೂರ್ವಕಾಲೇಜಿನ ಪ್ರತಿಭಾ ದಿನಾಚರಣಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ವಂ| ಫಾ. ಹೆನ್ರಿಡಿಸೋಜಕಾರ್ಯಕ್ರಮವನ್ನು ಉದ್ಫಾಟಿಸಿ ಆಶೀರ್ವಚನವಿತ್ತರು. ಅತಿಥಿಗಳಾದ ಶ್ರೀ ರೋಶನ್‍ಕಾಮತ್ ಮಾತನಾಡಿ ಪ್ರತಿಭೆಗಳು  ಸೂಕ್ತ ಮನ್ನಣೆ ಸಿಗಬೇಕೆಂದು ಕರೆಇತ್ತರು. ಕಾರ್ಯಕ್ರಮದಅಧ್ಯಕ್ಷತೆಯನ್ನುಪ್ರಾಂಶುಪಾಲರಾದ ಭಗಿನಿ ಸಾಧನಾರವರು ವಹಿಸಿದ್ದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಉಪನ್ಯಾಸಕಿ ಶ್ರೀಮತಿ ಲಿಡ್ವಿನ್‍ಕೊರೆಯಾ ಸ್ವಾಗತಗೈದರು. ಕುಮಾರಿ ಸಂಧ್ಯಾಕಾರ್ಯಕ್ರಮನಿರೂಪಿಸಿದರು. ಕುಮಾರಿ ಅಫಿಯಾವಂದಿಸಿದರು.

By suddi9

Leave a Reply

Your email address will not be published. Required fields are marked *