ಆಟಿ ತಿಂಗಳಲ್ಲಿ ಪ್ರಕೃತಿಯಲ್ಲಿ ಬೆಳೆಯುವ ಸೊಪ್ಪುಗಳು ಸ್ವಾಭಾವಿಕವಾಗಿ ಔಷಧಿಯ ಗುಣದಿಂದ ಕೂಡಿರುತ್ತವೆ.ಅದರಿಂದ ಮಾಡುವ ಖಾದ್ಯಗಳು ಆಹಾರವೂ ಹೌದು,ಔಷಧಿಯು ಹೌದು.ಎಂದು ನೇತ್ರವತಿ ಮಾತೃಮಂಡಳಿ ನೆತ್ತರಕೆರೆ ಇವರ ಆಶ್ರಯದಲ್ಲಿ ಮತ್ತು ನವೋದಯ ಮಿತ್ರ ಕಲಾವೃಂದ ನೆತ್ತರಕೆರೆ , ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಸಹಕಾರದೊಂದಿಗೆ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ಗಮ್ಮತ್ತ್ ಎಂಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗೋಪಾಲ ಅಂಚನ್ ರವರು ಮಾತನಾಡಿದರು.ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರವೀಂದ್ರ ಕಂಬಳಿಯವರು ಮಾತನಾಡಿ ಆಟಿ ತಿಂಗಳ ವಿಶೇಷತೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯವಿದೆ ಎಂದರು.aatida gammat
ಬೆಳಿಗ್ಗೆ ಆರಂಭವಾದ ಈ ಆಟಿದ ಗಮ್ಮತ್ತ್ ಸ್ಥಳೀಯರಿಗೆ ವಿಶೇಷ ಆಟೋಟ ಸ್ಫರ್ದೆಗಳು,ಸಂಗೀತ,ಭಾಷಣ ಸ್ಫರ್ದೆ,ಗಾದೆಮಾತುಗಳ ಸ್ಫರ್ದೆಗಳು ನಡೆಯಿತು.ಸಮಾರೋಪ ಸಮಾರಂಭದ ಬಳಿಕ ನಡೆದ ವಿಶೇಷ ಸಹ ಬೋಜನ ನಡೆಯಿತು.ಕಣಿಲೆ ಉಪ್ಪಿನಕಾಯಿ,ಕುಡುತ್ತ ಚಟ್ನಿ,ಹೆಸರುಕಾಳು ಗಸಿ,ಹಲಸಿನ ಕಬಾಬ್, ತಿಮರೆ ಚಟ್ನಿ,ಮಾವಿನ ಚಟ್ನಿ,ಪೂಂಬೆದ ಚಟ್ನಿ,ಹಲಸಿನ ಗಾರಿಗೆ,ಕಣಿಲೆ ಹೆಸರು ಗಸಿ,ತಜಂಕ್ ಸೊಪ್ಪಿನ ಖಾದ್ಯಗಳು,ಹಲಸಿನ ಗಟ್ಟಿ,ಮುಳ್ಳು ಸೌತೆಕಾಯಿ ಗಟ್ಟಿ, ಮುಂತಾದ ಸುಮಾರು 30 ಬಗೆಯ ಖಾದ್ಯಗಳು ವಿಶೇಷವಾಗಿತ್ತು.
ಸಮಾರಂಭದ ವೇದಿಕೆಯಲ್ಲಿ ಸಂತೋಷ್ ಎನ್, ದಾಮೋದರ ನೆತ್ತೆರ ಕೆರೆ ,ಉಮೇಶ್ ಸಾಲ್ಯಾನ್ ಬೆಂಜನ ಪದವು, ಶ್ರೀಮತಿ ನಳಿನಿ ರಾಮ,ಲಲಿತಾ ಸುಂದರ, ಸವಿತ ಪ್ರಭಾಕರ, ಮಾಲತಿ ಚಂದ್ರಹಾಸ,ಕುಮಾರಿ ರೇಣುಕ,ವನಿತಾ ರೋಹೊತಾಶ್ವ,ಕುಮಾರಿ ಚೈತ್ರ.ವಿದ್ಯಾ ಚಂದ್ರಶೇಖರ ,ಸರಸ್ವತಿ ಉಮೇಶ್ ,ಪಿ.ಸುಬ್ರಹ್ಮಣ್ಯ ರಾವ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *