ಭಾರತೀಯ ಯುವಮನಸುಗಳಲ್ಲಿ ರಾಷ್ಟ್ರೀಯತೆಯ ಚಿಂತನೆಗಳು ಬಸೆದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾದ್ಯ ಎಂದು ಕರ್ನಲ್ ಪ್ರಶಾಂತ್ ಪೇಟ್ಕರ್ ಹೇಳಿದರು. ಅವರು ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು . ವರ್ಷದ 365 ದಿನಗಳು ಸಹಾ ಸೈನಿಕರು ಮಳೆಬಿಸಿಲ್ಲೆನ್ನದೆ ಕಾರ್ಯನಿರ್ವಹಿಸುತ್ತಿದ್ದರೆ ಮಾತ್ರ ದೇಶದ ಸುರಕ್ಷತೆ ಸಾದ್ಯ ನಿಮಗೆಲ್ಲರಿಗೂ ಬಾನುವಾರವಾದರೂ ರಜೆಯಿದೆ ಆದರೆ ಭಾರತೀಯ ಸೇನೆಯಲ್ಲಿರುವವರಿಗೆ ರಜೆಯನ್ನುವುದು ಎಲ್ಲಿದೆ ಎಂದರು. IMG_20170730_171745

IMG_20170730_172004
ಮತ್ತೋರ್ವ ಮಾಜಿ ಸೈನಿಕ ಕರ್ನಲ್ ಶರತ್ ಭಂಡಾರಿ ಮಾತನಾಡಿ ದೇಶಸೇವೆಯೆಂದರೆ ಕೇವಲ ಸೇನೆಯಲ್ಲಿರುವುದಲ್ಲ ಬದಲಾಗಿ ನಮ್ಮ ಪರಿಸರವನ್ನು ಸ್ವಚ್ಚವಾಗಿರಿಸುವುದು ಸಹಾ ದೇಶಸೇವೆಯ ಒಂದು ಭಾಗವೇ ಎಂದರು. ಕಾರ್ಗಿಲ್ ಯುದ್ದದಲ್ಲಿ ಮಡಿದ ವೀರಯೋಧರಿಗೆ ನಮನಗಳನ್ನು ಸಹಾ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ಸೇವೆ ಸಲ್ಲಿಸಿದಂತಹಾ ಕರ್ನಲ್ ಪ್ರಶಾಂತ್ ಪೇಟ್ಕರ್, ಕರ್ನಲ್  ಶರತ್ ಭಂಡಾರಿ,ಕರ್ನಲ್ ಪ್ರವೀಣ್ ಕುಮಾರ್ ಶೆಟ್ಟಿ , ಮೇಜರ್ ದೀಪಕ್ ಅಡ್ಯಂತಾಯ,ಕ್ಯಾಪ್ಟನ್ ಭಗವನ್‍ದಾಸ್ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯ್ತು.
ಸ್ವಾಮಿ ವಿವೇಕಚೈತನ್ಯಾನಂದ ಸ್ವಾಗತಿಸಿದರು , ಕು. ಸ್ವಾತಿ ವಂದಿಸಿದರು, ಅಕ್ಷಯ್ ಭಟ್ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *