ವಾಮದಪದವು : ಸರಕಾರಿ ಪ್ರಥಮದರ್ಜೆಕಾಲೇಜು, ಇಲ್ಲಿ2017-18 ನೇ ಶೈಕ್ಷಣಿಕ ಸಾಲಿನ ವಿಜ್ಞಾನ ಸಂಘದಉದ್ಘಾಟನೆಯುಇತ್ತೀಚಿಗೆ ನೇರವೇರಿತು.ಉದ್ಘಾಟಿಸಿದ ಸ್ಥಳೀಯ ಸಮುದಾಯಆರೋಗ್ಯಕೇಂದ್ರದ ವೈದ್ಯಾಧಿಕಾರಿಡಾ.ಉಮೇಶಅಡ್ಯಂತಾಯಇವರು “ವೈಜ್ಞಾನಿಕ ಮನೋಭಾವನೆ, ಅನ್ವೇಷಣೆ, ಸಂಶೋಧನೆ ಇವುಗಳ ಬಗೆಗಿನ ಆಸಕ್ತಿ ಇಂದಿನ ಅಗತ್ಯ. ವಿದ್ಯಾರ್ಥಿಗಳು ತಾವು ತರಗತಿಗಳಲ್ಲಿ ಕಲಿತಿದ್ದನ್ನು ಪರೀಕ್ಷಾ ನೆಲೆಯಲ್ಲಿ ವಿಶ್ಲೇಷಿಸಿದಾಗ ವೈಜ್ಞಾನಿಕ ಬೆಳವಣಿಗೆಸಾಧ್ಯವಾಗುತ್ತದೆ. ಅನ್ವಯಿಕ ನೆಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವಿಜ್ಞಾನ ಸಂಘ ಅಗತ್ಯ”ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಕಾಲೇಜಿನಹಿರಿಯ ಪ್ರಾಧ್ಯಾಪಕರಾದ ಪ್ರೊ.ಹರಿಪ್ರಸಾದ್ ಬಿ. ಶೆಟ್ಟಿಅವರುಅಧ್ಯಕ್ಷತೆಯನ್ನುವಹಿಸಿದ್ದರು. ಗಣಿತಶಾಸ್ತ್ರದ ಪ್ರಾಧ್ಯಾಪಕರಾದಪ್ರೊ.ಗಣೇಶ್ ನಾಯಕ್ಇವರು ವಿಜ್ಞಾನ ಸಂಘದ ಪ್ರಾಮುಖ್ಯತೆಯ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕು.ಚಿನ್ಮಯ ಸ್ವಾಗತಿಸಿ,ಚೈತ್ರೇಶಇವರು ವಂದಿಸಿದರು. ಕು.ಅಕ್ಷತಾಕಾರ್ಯಕ್ರಮ ನಿರೂಪಿಸಿದರು.
