ಉಡುಪಿ: ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜು ಇದರ ಎನ್.ಎಸ್.ಎಸ್,ರೋವರ್ಸ್ ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕ ಇದರ ವತಿಯಿಂದ ಸರಳೇಬೆಟ್ಟು ವಿಜಯ ನಗರದಲ್ಲಿ ಭತ್ತದ ಗದ್ದೆಯಲ್ಲಿ ನೇಜಿ ನೇಡುವ ಮತ್ತು ಕೆಸರಿನಲ್ಲಿ ಒಂದು ದಿನ ಎಂಬ ವೆಶೇಷ ಕಾರ್ಯಕ್ರಮ ಜುಲ್ಯೆ.25 ರಂದು ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತಾಧಿಕಾರಿ ದಯಾನಂದ ಶೆಟ್ಟಿ,ಈ ರೀತಿಯ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಯಾವ ರೀತಿ ಕೃಷಿಯಲ್ಲಿ ಜನರು ಕಷ್ಟ ಪಡುತ್ತಾರೆ ಅನ್ನವನ್ನು ತಯಾರು ಮಾಡಲು ಯಾವ ರೀತಿ ಶ್ರಮ ಇದೆ ಎಂಬುದು ತಿಳಿಯುತ್ತದೆ ಎಂದರು.BeautyPlus_20170726220639_save (1)
ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ ಭಾರತ ಯುವ ರಾಷ್ಟ ಹೀಗಾಗಿ ಯುವಕರಿಗೆ ಕೃಷಿಯ ಬಗ್ಗೆ ತಿಳಿಯಬೇಕು ಈ ರೀತಿಯ ಕಾರ್ಯಕ್ರಮ ಅದಕ್ಕೆ ಪೂರಕ ಅದೇ ರೀತಿ ಮಣ್ಣಿನಲ್ಲಿ ಆಟವಡುದರಿಂದ ಆರೋಗ್ಯಕ್ಕು ಒಳ್ಳೆಯದು ಎಂದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಪೈ ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಉಪನ್ಯಾಸಕರಾದ ಚಿರಂಜನ್ ಸೇರಿಗಾರ್,ಜಯಲಕ್ಷಿ,ಅನಸೂಯ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.ದೈಹಿಕ ಶಿಕ್ಷಕ ಸಂತೋಷ್ ಪ್ರಸ್ಥಾವನೆ ಗೈದರು.ಶ್ರೀನಿವಾಸ ವೈದ್ಯ ನಿರೂಪಿಸಿದರು.ಕಾಲೇಜಿನ ವಿದ್ಯಾರ್ಥಿಗಳಿಗೆ ನೇಜಿ ನೇಡುವ ಪ್ರಾತ್ಯಕ್ಷಿಕೆ ನಡೆಸಲಾಯಿತು.

By suddi9

Leave a Reply

Your email address will not be published. Required fields are marked *