ವಾಮಂಜೂರು: ಸೈಂಟ್‍ರೈಮಂಡ್ಸ್ ಪದವಿ ಪೂರ್ವಕಾಲೇಜು ಹಾಗೂ ಸೈಂಟ್‍ರೈಮಂಡ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕ –ರಕ್ಷಕ ಸಂಘದ ವಾರ್ಷಿಕ ಮಹಾಸಭೆಯುಕಾಲೇಜು ಸಭಾಭವನದಲ್ಲಿಜರುಗಿತು.
ಸಭೆಯಆಧ್ಯಕ್ಷತೆಯನ್ನುಕಾಲೇಜಿನ ಸಂಚಾಲಕರೂ, ಶಿಕ್ಷಕ –ರಕ್ಷಕ ಸಂಘದಅಧ್ಯಕ್ಷರೂಆದ ವಂದನೀಯ ಭಗಿನಿ ಮಾರಿಯೋಲಾರವರು ವಹಿಸಿದ್ದರು. ಕಾಲೇಜು ವಿಭಾಗದ ಶಿಕ್ಷಕ –ರಕ್ಷಕ ಸಂಘದ ನೂತನಉಪಧ್ಯಕ್ಷರಾಗಿ ಶ್ರೀ ಅಬ್ದುಲ್ ಹಮೀದ್ ಬಿತ್ತುಪಾದೆ, ಆಂಗ್ಲಮಾಧ್ಯಮ ಪ್ರೌಢಶಾಲಾ ಶಿಕ್ಷಕ –ರಕ್ಷಕ ಸಂಘದಉಪಧ್ಯಕ್ಷರಾಗಿಎಡ್ವರ್ಡ್ ಫ್ರಾನ್ಸಿಸ್ ಪಿರೇರಾಆಯ್ಕೆಯಾದರು ಹಾಗೂ ಎರಡು ವಿಭಾಗದಕಾರ್ಯಕಾರಿ ಸಮಿತಿ ಸದಸ್ಯರ ಹೆಸರನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು.
ತದನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಹೆತ್ತವರನ್ನುದ್ಧೇಶಿಸಿ ಮಾತನಾಡಿದ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತಉಪನ್ಯಾಸಕರಾದ ಶ್ರೀ ರೊನಾಲ್ಡ್ ಪಿಂಟೊರವರು ವಿದ್ಯಾರ್ಥಿಗಳ ವ್ಯಕ್ತಿತ್ವ, ಚಾರಿತ್ರ್ಯ ಹಾಗೂ ಶೈಕ್ಷಣಿಕಉನ್ನತಿಯಕುರಿತು ಹೆತ್ತವರು ಕಾಳಜಿವಹಿಸಬೇಕೆಂದು ಕರೆನೀಡಿದರು.ಮತ್ತೋರ್ವರು ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ವೈದ್ಯಡಾ ವೆಂಕಟೇಶ್ ಸಂಜೀವರವರು, ಸ್ತನ ಕ್ಯಾನ್ಸರ್‍ಕುರಿತಂತೆಜಾಗೃತಿ ಮೂಡಿಸುವ ನಿಟ್ಟಿನಲ್ಲಿತನ್ನ ವಿಚಾರಧಾರೆ, ಸಲಹೆಗಳನ್ನು ಮಂಡಿಸಿದರು.ಪ್ರಾಂಶುಪಾಲೆ, ಭಗಿನಿ ಸಾಧನಾ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಲಿಡ್ವಿನ್‍ಕೊರೆಯಕಾರ್ಯಕ್ರಮ ನಿರೂಪಿಸಿದರು ಪ್ರೌಢಶಾಲಾದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಜಯರಾಜ್ ವಂದಿಸಿದರು.
