ಇಡ್ಕಿದು :ಶ್ರೀ ಕ್ಷೇ ಧ ಗ್ರಾ ಯೋಜನೆ ವಿಟ್ಲ ವಲಯ ಇದರ ವತಿಯಿಂದ `ರಾಜ್ಯ ಮಟ್ಟದ ಬೃಹತ್ ವನ ಸಂವರ್ಧನ ಅಭಿಯಾನ’ ದ ಸಲುವಾಗಿ ವನ ಸಂವರ್ಧನೆಗೆ ಆಧ್ಯತೆ ನೀಡುವ ಪರಮ ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆಯವರ ಕನಸಿನಂತೆ ಇಡ್ಕಿದು ಹಿಂದೂ ರುದ್ರ ಭೂಮಿಯಲ್ಲಿ ಗಿಡಗಳನ್ನು ನೆಡೆವ ಕಾರ್ಯಕ್ರಮ ನಡೆಯಿತು.

IMG-20170722-WA0066
ಈ ಕಾರ್ಯಕ್ರಮವನ್ನು ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕ ಸದಸ್ಯ ರಾಜಾರಾಮ ಶೆಟ್ಟಿ ಹಾಗೂ ವಿಟ್ಲ ವಲಯಾಧ್ಯಕ್ಷ ನರಸಿಂಹ ಬಳ್ಳಾಲ್ ರವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಯೋಜನೆಯ ಮೇಲ್ವಿಚಾರಕಿ ಪ್ರೇಮಾ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ ಮತ್ತು ಸದಸ್ಯರು, ಯೋಜನೆಯ ಆಂತರಿಕ ಲೆಕ್ಕ ಪರಿಶೋದಕಿ ಯಶೋಧ, ಜನ ಜಾಗೃತಿ ವೇದಿಕೆ ಸದಸ್ಯ ಸುರೇಶ್ ಮುಕ್ಕುಡ, ಒಕ್ಕೂಟದ ಅಧ್ಯಕ್ಷರುಗಳಾದ ಜನಾರ್ಧನ ಕುಲಾಲ್, ಸುಂದರ ಗೌಡ, ದಾಮೋದರ ಪೂಜಾರಿ ಮತ್ತು ಗಣೇಶ ವಿ, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಗೂ ಯೋಜನೆಯ ಪಾಲುದಾರ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *