ಬಂಟ್ವಾಳ: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ಕಟ್ಟಿ ವಾಸ್ತವ್ಯ ಹೊಂದಿದ ಸುಮಾರು 84 ಮಂದಿ ಬಡ ಅರ್ಹ ಕುಟುಂಬಗಳಿಗೆ 94ಅಡಿಯಲ್ಲಿ ಹಕ್ಕು ಪತ್ರ ವಿತರಣೆಗೆ ತಯಾರು ಮಾಡಿದ ಕೆದಿಲ ಗ್ರಾಮಲೆಕ್ಕಾಧಿಕಾರಿ ವಿಶ್ವನಾಥ್ ಅವರಿಗೆ ಪುತ್ತೂರು ಶಾಸಕಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಅವರು ಪುರಸ್ಕಾರ ನೀಡಿ ಅಭಿನಂದಿಸಿದ್ದಾರೆ.

vishwanath sanmana
ಮನೆಯ ಅಡಿ ಸ್ಥಳದ ದಾಖಲೆ ಪತ್ರಕೋರಿ 94ಸಿಯಡಿ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಖುದ್ಧು ಪರಿಶೀಲನೆ ನಡೆಸಿದ ಗ್ರಾಮಲೆಕ್ಕಾಧಿಕಾರಿ ಅಲ್ಪಕಾಲ ಮಿತಿಯ ಸಮಯದಲ್ಲಿ ಅಳತೆ ಹಾಗೂ ಕಡತ ನಿರ್ವಹಣೆ ಇನ್ನಿತರ ಕಾರ್ಯ ಪೂರೈಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರ ವಹಿಸಿದ ಗ್ರಾಮಲೆಕ್ಕಾಧಿಕಾರಿಯವರನ್ನು ಶಾಸಕರು ಅಭಿನಂದಿಸಿದರು. ಈ ಸಂದರ್ಭ ಫಲಪುಷ್ಪ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ದಿವಾಕರ್ ಮುಗುಳಿಯ, ಗ್ರಾಮಕರಣಿಕರು ಹಾಗೂ ಗ್ರಾಮ ಸಹಾಯಕರು ಈ ಸಂದರ್ಭದಲ್ಲಿ ಹಾಜರಿದ್ದು, ಶುಭ ಹಾರೈಸಿದರು.

 

By suddi9

Leave a Reply

Your email address will not be published. Required fields are marked *