ಬಂಟ್ವಾಳ : ಸಂಘಟನೆ, ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ “ಸಂಸಾರ ಜೋಡುಮಾರ್ಗ” ತಂಡದ ನೂತನ ಕಚೇರಿ ತಾಲೂಕಿನ ಮಾಣಿ ಯಲ್ಲಿ ಭಾನುವಾರ ಉದ್ಘಾಟನೆಗೊಂಡಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ ದೀಪಬೆಳಗಿಸಿ, ಜಂಬೆ ಬಾರಿಸುವ ಮೂಲಕ ಕಛೇರಿಯನ್ನು ಉದ್ಘಾಟಿಸಿ, ಮಕ್ಕಳನ್ನು ಸಾಹಿತ್ಯ, ರಂಗಭೂಮಿಯ ಮೂಲಕ ಕ್ರಿಯಾಶೀಲರಾಗಿಸುವ ಕಾರ್ಯ ಮತ್ತಷ್ಟು ಉಲ್ಲಾಸಮಯವಾಗಿ ನಡೆಯಲಿ ಎಂದರು. ತಂಡದ ಸಂಚಾಲಕ ಮೌನೇಶ ವಿಶ್ವಕರ್ಮ ಮಾತನಾಡಿ, ಸಂಸಾರ ತಂಡ ಕಳೆದ 13 ವರ್ಷಗಳಿಂದ ಪುತ್ತೂರು ಹಾಗೂ ಬಂಟ್ವಾಳ ತಾಲೂಕನ್ನು ಕೇಂದ್ರವಾಗರಿಸಿಕೊಂಡು ಹಲವಾರು ಚಟುವಟಿಕೆಗಳನ್ನು ನಡೆಸುತ್ತಿದ್ದು, ಮುಂದಿನದಿನಗಳಲ್ಲಿ ಮಾಣಿಯಲ್ಲಿ ಕರಕುಶಲ ಹಾಗೂ ರಂಗಭೂಮಿ ತರಗತಿಗಳನ್ನು ನಡೆಸಲಾಗುವುದು ಎಂದರು.IMG_20170716_105548 copy
ಪ್ರಮುಖರಾದ ಪ್ರಫುಲ್ಲ ರೈ, ಹೇಮಾವತಿ ಸಂಪ್ಯ, ಸುರೇಶ್ ಆಚಾರ್ಯ ಕಲ್ಲಡ್ಕ, ಕೊಡಾಜೆ ಸೀತಾರಾಮ ಆಚಾರ್ಯ, ಶಕುಂತಳಾ ಮೊದಲಾದವರು ಉದ್ಘಾಟನಾ ಕಾರ್ಯಕ್ರಮದ ಸಂದರ್ಭ ಉಪಸ್ಥಿತರಿದ್ದು ಶುಭಹಾರೈಸಿದರು. ಮೌನೇಶ ವಿಶ್ವಕರ್ಮ ಸ್ವಾಗತಿಸಿ, ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *