ಮಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನ ಕರ್ಮಕಾಂಡ ಹೊರಬಿದ್ದ ಬೆನ್ನಲ್ಲೇ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿಯೂ ವಿಚಾರಣಾಧೀನ ಕೈದಿಗಳು ಜೈಲಿನಲ್ಲೇ ಬಾಡೂಟ ನಡೆಸಿರುವುದು ಬೆಳಕಿಗೆ ಬಂದಿದೆ.ಕೈದಿಗಳ ಬಾಡೂಟದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೈಲಿನ ವಾಸ್ತವ ಚಿತ್ರಣಕ್ಕೆ ಕನ್ನಡಿ ಹಿಡಿಯುತ್ತಿದೆ. ಫೋಟೋದಲ್ಲಿರುವ ಕೈದಿಗಳು ಆರು ತಿಂಗಳ ಹಿಂದೆ ನಡೆದ ನಟೋರಿಯಸ್ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದ ಆರೋಪಿಗಳು.
ಚಿತ್ರ ಕೃಪೆ : ಪಬ್ಲಿಕ್ ಟಿವಿ
ಹೊರಗಿನಿಂದ ಪಾರ್ಸೆಲ್ ತರಿಸಿ, ಜೈಲಿನ ಸೆಲ್ ಒಳಗೇ ಗುಂಡು-ತುಂಡಿನ ಪಾರ್ಟಿ ನಡೆಸಿದ್ದಾರೆ. ಗ್ಲಾಸ್, ಮದ್ಯದ ಬಾಟಲಿ ಎದುರಿಟ್ಟುಕೊಂಡು ಕೈದಿಗಳೇ ಫೋಟೋ ತೆಗೆದಿದ್ದಾರೆ. ಅಷ್ಟೇ ಅಲ್ಲ, ಸೆಲ್ ಒಳಗೆ ವಿಭಿನ್ನ ಭಂಗಿಯಲ್ಲಿ ನಿಂತು ಫೋಟೊ ತೆಗೆದು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಕೈದಿಗಳು ಮೊಬೈಲ್ ಬಳಸುತ್ತಿರುವುದೂ ಇದರಿಂದ ಸಾಬೀತಾಗಿದೆ.ಇಷ್ಟೆಲ್ಲ ನಡೆದಿರಬೇಕಾದರೆ ಜೈಲು ಸಿಬಂದಿ ಕೈವಾಡ ಇಲ್ಲದೆ ಸಾಧ್ಯವಿಲ್ಲ. ಹಣ ಇದ್ದವರು ಜೈಲಿನಲ್ಲೂ ಐಷಾರಾಮಿ ಜೀವನ ನಡೆಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ ನೀಡುವಂತಿದೆ.
