ಬಂಟ್ವಾಳ : ತುಂಬೆ ಮಜಿ ಬೆರುವ ನೆತ್ತರಕೆರೆ ಸಂಪರ್ಕ ರಸ್ತೆಗೆ ರೂ.5ಲಕ್ಷ ವೆಚ್ಚದ ಕಾಂಕ್ರಿಟೀಕರಣದ ರಸ್ತೆ ಕಾಮಗಾರಿಯ ಶಿಲಾನ್ಯಾಸವನ್ನು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ.ಶೆಟ್ಟಿ, ಗ್ರಾ.ಪಂ.ಸದಸ್ಯ ಮಧುಸೂದನ್ ಶೆಣೈ, ಮಾಜಿ ಜಿ.ಪಂ.ಸದಸ್ಯ ಉಮರ್ ಫಾರೂಕ್, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ನಿಸಾರ್ ಅಹಮ್ಮದ್, ತುಂಬೆ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ, ಇಂಜಿನಿಯರ್ ರವಿ, ಗುತ್ತಿಗೆದಾರರಾದ ದೇವದಾಸ್ ತುಂಬೆ, ಓಸ್ವಾಲ್ಡ್ ಗೋವಿಯಸ್, ಪ್ರಮುಖರಾದ ನಿಯಾಝ್ ವಳವೂರು, ಕೇಶವ ದೋಟ, ಮಾಧವ ಬರೆ, ಪ್ರಭಾಕರ್, ಇಬ್ರಾಹಿಂ, ರಶೀದ್, ಸುಂದರ ದೋಟ, ಇಮ್ತಿಯಾಝ್ ಉಪಸ್ಥಿತರಿದ್ದರು.
