ಮೂಡುಮಾರ್ನಾಡು ನಿವಾಸಿ ದಿನಕರ ಪೂಜಾರಿ ಇವರು ಮೂಲತಹಾ ಬಡ ಕುಟುಂಬದವರಾಗಿದ್ದು . ಹೊಟೆಲ್‍ನಲ್ಲಿ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ನಡೆಸುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆವಾಗಿತ್ತು. ಅದೊಂದು ದಿನ ಇದ್ದಕ್ಕಿದ್ದಂತೆ ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದವರಿಗೆ ಆಘಾತ ಕಾದಿತ್ತು. ಡಾಕ್ಟರ್ ಹೇಳಿದ ವಿಚಾರ ಕೇಳಿ ಅವರಿಗೆ ದಿಕ್ಕೆ ತೋಚದಂತಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಎರಡೂ ಕಿಡ್ನಿಗಳೂ ವಿಫಲಗೊಂಡಿವೆ ಎಂದರು. ಈ ಮಾತನ್ನು ಕೇಳಿದ ಕುಟುಂಬದವರಿಗೆ ದಿಕ್ಕೆ ತೋಚದಾಯ್ತು ಮನೆಯಲ್ಲಿ ಕಿತ್ತು ತಿನ್ನುವ ಬಡತನ ಜೊತೆಯಲ್ಲಿ ವಾರಕ್ಕೆರಡು ಬಾರಿ ಅಂದರೆ ತಿಂಗಳಿಗೆ 8 ಬಾರಿ ಡಯಾಲಿಸಿಸ್‍ಗೆ ಹೋಗಬೇಕಾದ ಪರಿಸ್ಥಿತಿ ಆಧಾರ ಸ್ಥಂಭವೇ ಬಿದ್ದಿರುವಾಗ ಕುಟುಂಬದ ನಿರ್ವಹಣೆ ದುಸ್ತರವಾಗಿದೆ ಎನ್ನುತ್ತಿದ್ದಾರೆ ದಿನಕರ್‍ರವರ ಪತ್ನಿ ಶಕುಂತಲಾ.
ವೈದ್ಯರು ಸೂಚಿಸಿರುವಂತೆ ಅವರ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ಚಿಕಿತ್ಸೆಗೆ ಸುಮಾರು 10 ಲಕ್ಷ ವೆಚ್ಚ ತಗುಲುತ್ತದೆ ಎಂದು ತಿಳಿಸಿದ್ದಾರೆ. ಬಡತನದಿಂದ ನರಳುತ್ತಿರುವ ಕುಟುಂಬಕ್ಕೆ ಕೊಡುಗೈ ದಾನಿಗಳು ಯಾರಾದರೂ ಸಹಾಯ ನೀಡಬಹುದೇ ಎಂದ ವಿನಂತಿ.
