ಪೊಳಲಿ : ಶ್ರೀ ದುರ್ಗಾಪರಮೇಶ್ವರಿ ಹಾಗೂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನವೀಕರಣ ಮತ್ತು ಜೀರ್ಣೋದ್ಧಾರ ಕಾರ್ಯಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು ,ಈ ಪ್ರಯುಕ್ತ ಊರವರ ಹಾಗೂ ಪರವೂರಿನ ಭಕ್ತಾದಿಗಳು ದಿನಂಪ್ರತಿ ರಾತ್ರೆ ದೇವಾಲಯದ ಕರಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಮಹಿಳೆಯರು ಮಕ್ಕಳು ಸೇರಿದಂತೆ ಹಲವು ಮಂದಿ ದೇವಾಲಯದ ಕರಸೇವೆಯಲ್ಲಿ ಉತ್ಸಾಹದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಇದೀಗ ದೇಗುಲದ ಕರಸೇವಾ ಕಾರ್ಯವು ದಿನಂಪ್ರತಿ ನಡೆಯುತ್ತಿದ್ದು, ಜಾತಿ ಮತ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಕರಸೇವೆಯಲ್ಲಿ ತೊಡಗಿಸಿಕೊಡಿದ್ದಾರೆ. ಇದಲ್ಲದೆ ಕೂಲಿ ಕೆಲಸಕ್ಕಾಗಿ ಉತ್ತರ ಕರ್ನಾಟಕದಿಂದ ವಲಸೆ ಬಂದಂತಹಾ ಹಾವೇರಿ ಮೂಲದ ಸುಮಾರು 20 ಮಂದಿ ಕಾರ್ಮಿಕರು ದೇವಸ್ಥಾನದ ಕರಸೇವೆಯಲ್ಲಿ ಭಾಗಿಯಾಗಿರುವುದು ವಿಶೇಷ


