Bysuddi9

Jul 6, 2017

ಬಂಟ್ವಾಳ : ರಾ.ಹೆ.೭೫ ರ ಕಲ್ಲಡ್ಕ ಸಮೀಪದ ಕೆ.ಸಿ.ರೋಡಿನಲ್ಲಿ ಕ್ವಾಲೀಸ್ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಮ್ರತ ಬೈಕ್ ಸವಾರನನ್ನು ಬಿ.ಸಿ.ರೋಡ್ ಕೈಕಂಬ ಪಲ್ಯ೯ದ ನಂದರಬೆಟ್ಟು ನಿವಾಸಿ  ಇಸ್ಮಾಯಿಲ್ ಎಂಬವರ ಪುತ್ರಮಹಮ್ಮದ್ ಓಯಿಸ್(೨೦)ಎಂದು ಗುರುತಿಸಲಾಗಿದೆ.IMG-20170706-WA0009

ಕಲ್ಲಡ್ಕದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದು ವಾಪಾಸು ಮನೆಗೆ ಬರುತ್ತಿದ್ದಾಗ ಈ ಅಪಘಾತ ನಡೆದಿದೆ.ಬಂಟ್ವಾಳದಿಂದ ವಿಟ್ಲ ಕಡೆಗೆ ಹೋಗುವ ಕ್ವಾಲೀಸ್ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಓಯಿಸ್ ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡು ಸ್ಥಳದಲ್ಲೆ ಮ್ರತಪಟ್ಟಿದ್ದಾನೆ ಎಂದು ಹೇಳಲಾಗಿದೆ.ಈಬಗ್ಗೆ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಯುತ್ತಿದೆ.

By suddi9

Leave a Reply

Your email address will not be published. Required fields are marked *