ಉಡುಪಿ:ಪತ್ರಿಕೋದ್ಯಮದಲ್ಲಿ ಕೇವಲ ಪತ್ರಿಕಾ ಧರ್ಮ ಪಾಲಿಸದೆ ಮಾನವತಾ ಧರ್ಮ ಪಾಲನೆ ಮಾಡಬೇಕಾಗಿದೆ ಎಂದು ತರಂಗ ವಾರ ಪತ್ರಿಕೆಯ ಸಂಪಾದಕರಾದ ಯು.ಬಿ ರಾಜಲಕ್ಷೀ ಹೇಳಿದರು.ಅವರು ಜುಲ್ಯೆ.5 ಬುಧವಾರ ನಗರದ ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರ.ದ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಪತ್ರಿಕಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
3 ದಶಕದ ಹಿಂದಿನ ಪತ್ರಿಕೋದ್ಯಮ ಮತ್ತು ಇಂದಿನ ಪತ್ರಿಕೋದ್ಯಮದಲ್ಲಿ ಬಹಳಷ್ಟು ವ್ಯತ್ಯಾಸವಿದೆ ಅಭಿವೃಧಿ ಪತ್ರಿಕೋದ್ಯಮ ಬೆಳೆಸಬೇಕು ವಿದ್ಯಾರ್ಥಿಗಳು ಸಮಾಜದಲ್ಲಿರುವ ಅಂಕೊಡೊಂಕುಗಳ ಬಗ್ಗೆ ಪತ್ರಿಕೆಗೆ ಬರೆದು ಅದರ ಪರಿವರ್ತನೆಗೆ ಕಾರಣರಾಗಬೇಕು ಹೆಚ್ಚು ಅದ್ಯಯನ ಶೀಲರಾಗಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೋ.ಜಗದೀಶ್ ರಾವ್ ವಹಿಸಿ ಶುಭ ಹಾರೈಸಿದರು.
ಅತಿಥಿ ಜಿಲ್ಲಾ ಪತ್ರಕರ್ತರ ವೇದಿಕೆಯ ಅದ್ಯಕ್ಷ ಶೇಖರಜೆಕಾರು ಮಾತನಾಡಿ ಸಮಾಜದಲ್ಲಿ ಪತ್ರಿಕೆಗೆ ಉತ್ತಮ ಮಾನ್ಯತೆಯಿದೆ ಪ್ರಜಾಪ್ರಭುತ್ವದಲ್ಲಿ ಇದು ಹೆಚ್ಚಿನ ಸ್ಥಾನಮಾನ ಪಡೆದಿದೆ ಎಂದರು
.
ವೇದಿಕೆಯಲ್ಲಿ ಜೇಸಿ ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು,ವಿಭಾಗದ ಪ್ರಭಾರ ಮುಖ್ಯಸ್ಥರಾದ ಸಂದ್ಯಾ,ಗ್ರಂಥಪಾಲಕರು ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಮಂಜಪ್ಪ ದ್ಯಾ ಗೋಣಿ ಸ್ವಾಗತಿಸಿ ಪ್ರಸ್ತಾವಿಸಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.
