ಬಂಟ್ವಾಳ; ಆಲ್ ಕಾರ್ಗೋ ಲಾಜೆಸ್ಟಿಕ್ ಲಿಮಿಟೆಡ್ ಹಾಗೂ ಪ್ರಜ್ಞಾ ಸಲಹಾ ಕೇಂದ್ರ, ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಹಾಗೂ ದಂತ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇವರ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರವು ಮಲ್ಲೂರು ಬದ್ರಿಯಾ ನಗರದ ಸಂತ ಅಂತೋನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆಯಿತು.
ಪ್ರಜ್ಞಾ ಸಲಹಾಕೇಂದ್ರದ ಸಂಯೋಜಕ ವಿಲಿಯಂ ಸ್ವಾಮುವೆಲ್, ವೀಕ್ಷಣಾಧಿಕಾರಿ ರೇಷ್ಮಾ ಜೋಗಿ, ಕೆ.ಎಂ.ಸಿ.ಆಸ್ಪತ್ರೆಯ ಶಿಬಿರಾಧಿಕಾರಿ ಹರ್ಬಟ್ ಡಿ’ಸೋಜ ಮತ್ತು ವೈದ್ಯಕೀಯ ವೃಂದದವರು ಉಪಸ್ಥಿತರಿದು. ಪ್ರಜ್ಞಾ ಸಲಹಾಕೇಂದ್ರದ ವಲಯ ಸಂಯೋಜಕರಾದ ಚಂದ್ರಶೇಖರ್, ಶೀಲಾ ಬಿ.ಶೆಟ್ಟಿ ಶಿಬಿರವನ್ನು ಸಂಯೋಜನೆಗೊಳಿಸಿದ್ದರು. ಆಸುಪಾಸಿನ ಗ್ರಾಮಗಳ ನೂರಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

