ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶೇಡಿಗುರಿ ಶಾಖೆ ಆಶ್ರಯದಲ್ಲಿ ಜು. 2ರಂದು ಗುರುಪೂಜೆ ಉತ್ಸವ ನಡೆಯಿತು. ಪುತ್ತೂರು ಜಿಲ್ಲಾ ಬೌದ್ದಿಕ್ ಪ್ರಮುಖ ಲಕ್ಷ್ಮಣದಾಸ್ ಪುಂಜಾಲಕಟ್ಟೆ ಗುರುಪೂಜೆ ಮಹತ್ವ, ಉದ್ದೇಶ ತಿಳಿಸಿದರು. ಸ್ವಯಂ ಸೇವಕರಿಗೆ ಭಗವಧ್ವಜವೇ ಗುರು, ಅದು ತ್ಯಾಗ, ಶೌರ್ಯದ ಸಂಕೇತ, ಪೂಜನೀಯ ಎಂದರು.IMG-20170703-WA0008

ಗುರುಪೂಜೆ ಉತ್ಸವವನ್ನು ಹಿಂದೂ ಸಮಾಜ ಆಚರಿಸುತ್ತದೆ. ರಾಮಾಯಣದ ಶ್ರೀರಾಮ, ಮಹಾಭಾರತದ ಶ್ರೀಕೃಷ್ಣನಿಗೂ ಗುರುಗಳಿದ್ದರು. ಯಾವುದೇ ವ್ಯಕ್ತಿಗೆ ಗುರು ಇಲ್ಲದೆ ಗುರಿ ಸಾದಿಸಲು ಸಾಧ್ಯವಿಲ್ಲ. 1925ರಲ್ಲಿ ಸಂಘ ಆರಂಭವಾಯಿತು. 1927 ಆಷಾಢ ಹುಣ್ಣಿಮೆಯಂದು ಗುರುಪೂಜೆ ಪ್ರಾರಂಭಗೊಂಡಿತು. ಎಲ್ಲಾ ಸಂಘದ ಶಾಖೆಗಳಲ್ಲಿ ಮೊದಲು ಆರಂಭಿಸಿದರು ಗುರುಗಳೇ ಆಗಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಭಗವಧ್ವಜವೇ ಪರಮಗುರು, ವ್ಯಕ್ತಿ ಪರಿಪೂರ್ಣನಲ್ಲ, ರಾಷ್ಟ್ರಕಟ್ಟುವ ನಮ್ಮ ಕಾರ್ಯಕ್ಕೆ ಪ್ರೇರಣಾದಾಯಿ ನಮ್ಮ ಭಗವಧ್ವಜ, ಭರತ ಆಯೋಧ್ಯೆಯಲ್ಲಿ ರಾಮನ ಪಾದುಕೆ ಇಟ್ಟು ರಾಜ್ಯಭಾರ ಮಾಡಿದ. ಶ್ರೀರಾಮ ವ್ಯಕ್ತಿಗತವಾಗಿ ರಾಜ್ಯದಲ್ಲಿ ಇಲ್ಲದಿದ್ದರು ರಾಮನ ಆದರ್ಶ ರಾಜ್ಯವಾಳಿತು.
ಸಹೋದರ ಸಹೋದರಿಯರಲ್ಲಿ ಮೊದಲಿಗೆ ತಂಗಿಯ ವಿವಾಹ, ನಂತರ ಅಣ್ಣನ ವಿವಾಹ ಆಗುತ್ತದೆ. ಪ್ರಾಯದಲ್ಲಿ ಅಣ್ಣನೇ ಹಿರಿಯನಾದರೂ ಸಹೋದರಿಗೆ ಆಗಬೇಕಾದ ವೈವಾಹಿಕ ಕ್ರಿಯೆಗಳ ಬಳಿಕ ಆತ ವಿವಾಹ ಆಗುವುದು ತ್ಯಾಗದ ಸಂಕೇತ ಎಂದರು.

ದೇಶಕ್ಕೆ ಭಯೋತ್ಪಾದಕರ ಸವಾಲು ಎದುರಾಗಿದೆ. ಕೆಲವು ರಾಜ್ಯಗಳಲ್ಲಿ ಅಲ್ಪ ಸಂಖ್ಯಾತರು ಬಹುಸಂಖ್ಯಾತರಾಗಿದ್ದಾರೆ. ದ. ಕ.ಜಿಲ್ಲೆಯಲ್ಲಿ ಇಂದು ಹಿಂದುಗಳ ಸಂಖ್ಯೆ ಕ್ಷಿಣಿಸುವ ಮೂಲಕ ಸಮಸ್ಯೆ ಎದುರಾಗುತ್ತಿದೆ ಎಂದು ವಿವರಿಸಿದರು.ಶ್ರೀಶ ರಾಯಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೂರಕ್ಕೂ ಅಧಿಕ ಸ್ವಯಂ ಸೇವಕರು ಭಾಗವಹಿದ್ದರು.ಸಂಜೀವ ನಾಟಿ ಸ್ವಾಗತಿಸಿ, ಸುರೇಶ್ ಶೇಡಿಗುರಿ ವಂದಿಸಿದರು.

By suddi9

Leave a Reply

Your email address will not be published. Required fields are marked *