ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹದಿ ಹರೆಯದ ಮಕ್ಕಳ ಸಮಸ್ಯೆಗಳ ಮಾಹಿತಿ ಹಾಗೂ ಕಾನೂನು ಸಲಹೆ:
ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹದಿ ಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳ ಕುರಿತಾದ ಮಾಹಿತಿ ಹಾಗೂ ಸಂವಾದ ಮತ್ತು ಕಾನೂನು ಸಲಹೆ ಕಾರ್ಯಕ್ರಮ ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಆ್ಯನ್ಸ್ ಕ್ಲಬ್ ಬಂಟ್ವಾಳ ಇದರ ಸಹಯೋಗದೊಂದಿಗೆ ಜು.30ರಂದು ನಡೆಯಿತು.
ಶಾಲಾ ಸಂಚಾಲಕರಾದ ಪ್ರಹ್ಲಾದ್.ಜೆ.ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ, ಪ್ರಸೂತಿ ತಜ್ಞೆ ಡಾ|| ಭಾರತಿ ಶೆಟ್ಟಿಯವರು ಮಾತನಾಡಿ ಹದಿಹರೆಯ ನಮ್ಮ ಜೀವನದ ಪ್ರಮುಖ ಘಟ್ಟವಾಗಿದೆ ಎಂದರು.
6 ರಿಂದ 10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹದಿ ಹರೆಯದ ಹೆಣ್ಣು ಮಕ್ಕಳ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಕುರಿತು ತಿಳಿಸಿದರು. ಹೆಣ್ಣು ಮಕ್ಕಳ ವೈಯಕ್ತಿಕ ಸಮಸ್ಯೆಗಳ ಕುರಿತು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಶಾಪ್ರಸಾದ್ ರೈ (ಸಿ.ಡಿ.ಪಿ.ಓಕೌನ್ಸಿಲೇಟರ್) ಬಿಸಿರೋಡ್ ಇವರು ಕಾನೂನಿನ ಬಗ್ಗೆ ಅರಿವು ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟೇರಿಯನ್ ಪಲ್ಲವಿ ಕಾರಂತ್ ಅಧ್ಯಕ್ಷರು ಆ್ಯನ್ಸ್ ಕ್ಲಬ್ ಬಂಟ್ವಾಳ, ಸವಿತಾ ನಿರ್ಮಲ್ ಸದಸ್ಯರು ಆ್ಯನ್ಸ್ ಕ್ಲಬ್ ಬಂಟ್ವಾಳ, ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್, ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ.ವಿ.ಶೆಟ್ಟಿ ಹಾಗೂ ಗ್ರೇಸ್.ಪಿ.ಸಲ್ಡಾನ ಉಪಸ್ಥಿತರಿದ್ದರು. ಶಿಕ್ಷಕರಿಯರಾದ ಲೀಲಾರವರು ಸ್ವಾಗತಿಸಿ, ಶುಭಾ.ಕೆ ವಂದಿಸಿದರು. ಸುಧಾ ಎನ್. ರಾವ್ ಕಾರ್ಯಕ್ರಮ ನಿರೂಪಿಸಿದರು.