ರಾಯಚೂರು: ಪೇಜಾವರ ಶ್ರೀಗಳಿಂದ ಇಫ್ತಿಯಾರ್ ಕೂಟ ಆಯೋಜನೆ ತಪ್ಪಲ್ಲ. ಅವರು ಹಿರಿಯರು ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದಾರೆ ಎಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಉಡುಪಿ ಫಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಶ್ರೀಗಳ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.ಪೇಜಾವರ ಶ್ರೀಗಳು ಸಾಮರಸ್ಯ ಕಾಪಾಡುವ ಉದ್ದೇಶದಿಂದ ಮುಸ್ಲಿಂ ಬಾಂಧವರಿಗೆ ಕೂಟ ಆಯೋಜಿಸಿದ್ದರು. ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಿಂದೂಪರ ಕಾಳಜಿ ಮೆಚ್ಚುವಂಥದ್ದು. ಹಾಗೆಂದ ಮಾತ್ರಕ್ಕೆ ಪೇಜಾವರರ ವಿರುದ್ಧ ಹೋರಾಟ ಮಾಡುವುದು ಸರಿಯಲ್ಲ.
ಮುಂದೆ ತಮ್ಮ ಪರ್ಯಾಯ ಅವಧಿಯಲ್ಲಿ ಇಂಥ ಯಾವುದೇ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿಲ್ಲ ಎಂದರು.ಅಲ್ಲದೇ ಕೇಂದ್ರದ ಗೋಹತ್ಯೆ ನಿಷೇಧ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ತೀರ್ಥರು, ಸಾಹಿತಿ ಭಗವಾನ್ ಮತ್ತಿತರರು ಮೈಸೂರಿನಲ್ಲಿ ಗೋಮಾಂಸ ಸೇವಿಸಿರುವುದು ಮುಸ್ಲಿಂ ಸಮಾಜದವರ ಮೇಲಿನ ಪ್ರೀತಿಯಿಂದಲ್ಲ. ಬದಲಿಗೆ ಹಿಂದೂಗಳ ಮೇಲಿನ ಅವರ ದ್ವೇಷಕ್ಕೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು
