ಉನ್ನಾವೊ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಎಂದಿನಿಂದ ಆರಂಭಿಸಬೇಕು ಎಂಬುದನ್ನು ಕರ್ನಾಟಕದಲ್ಲಿ ನಿರ್ಧರಿಸಲಾಗುತ್ತದಂತೆ.ನವೆಂಬರ್ನಲ್ಲಿ ಉಡುಪಿಯಲ್ಲಿ ನಡೆಯಲಿರೋ ‘ಧರ್ಮ ಸಂಸತ್’ ಸಭೆಯಲ್ಲಿ ರಾಮಮಂದಿರ ನಿರ್ಮಾಣದ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಉನ್ನಾವೊ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. 
ಉಡುಪಿಯಲ್ಲಿ ನಡೆಯಲಿರೋ ‘ಧರ್ಮ ಸಂಸತ್’ ಸಭೆಯಲ್ಲಿ ದೇಶದೆಲ್ಲೆಡೆ ಸಾಧು-ಸಂತರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ರಾಮ ಮಂದಿರ ನಿರ್ಮಾಣಕ್ಕೆ ದಿನಾಂಕ ನಿಗದಿಯನ್ನು ಅಂತಿಮಗೊಳಿಸಲಾಗುತ್ತದೆ. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ತಡೆಯುವ ಶಕ್ತಿ ಈ ಭೂಮಿ ಮೇಲಿಲ್ಲ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.ಅಲ್ಲದೇ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ಮಧುರಾಚಾರ್ಯ ವಿಶೇಷ್ ಕೀರ್ತಿ ಜೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದು ಸಾಕ್ಷಿ ಮಹಾರಾಜ್ ತಿಳಿಸಿದ್ದಾರೆ.
