ಮಂಗಳೂರು;
ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯಲ್ಲಿ ಸಂಕೇತ ಮಂಗಳೂರು ತಂಡದಿಂದ ಪ್ರದರ್ಶನಗೊಂಡ ಪರಂಪರೆ ನಾಟಕ ಎಲ್ಲರ ಮೆಚ್ಚಗೆಗೆ ಪಾತ್ರವಾಯಿತು.
ಕೌಟುಂಬಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುತ್ತಿರುವ ಇಂದಿನ ಆಧುನಿಕ ಕಾಲ ಘಟ್ಟದಲ್ಲಿ ನಾವು ನಮ್ಮವರನ್ನು ಕಳಕೊಳ್ಳುತ್ತಿದ್ದೇವೆ. ಹೆತ್ತ ತಾಯಿಯು ವಯಸ್ಸಾದಂತೆ ನಿರ್ಲಕ್ಷ್ಯಕ್ಕೊಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ಹೆತ್ತ ತಾಯಿಯನ್ನೇ ಕೀಳಾಗಿ ಕಾಣುತ್ತಾ, ಮನೆಯಿಂದ ಹೊರಹಾಕಿ ನಿರ್ಗತಿಕಳಂತೆ ಮಾಡುವ ದುಷ್ಟಪ್ರವೃತ್ತಿ ಇವತ್ತಿನ ದಿನಗಳಲ್ಲಿ ಫ್ಯಾಶನ್ ಅಂದುಕೊಂಡಂತಿದೆ.ಅಭಿನಯದಲ್ಲಿ ಪ್ರೌಢಿಮೆಗಳಿಸಿ, ಪಾತ್ರಕ್ಕೆ ಜೀವ ತುಂಬಿ ನಟಿಸಿದ ಕಲಾವಿದರ ಪರಿಶ್ರಮ ಸಾರ್ಥಕ ಎನಿಸಿತು. ವಾಸ್ತವ ಬದುಕಿನ ನೈಜ ಚಿತ್ರಣವನ್ನು ನಾಟಕದ ಮೂಲಕ ಬಿಂಬಿಸಿದ ಪ್ರಯತ್ನ ಮೆಚ್ಚುವಂತದ್ದು.

unnamed
“ತಾಯಿಯೇ ದೇವರು” ಎನ್ನುವುದನ್ನು ಮರೆತು ದಾರಿಬದಿಯ ಕಲ್ಲುಗಳಿಗೆ ನಮಸ್ಕರಿಸಿ, ತಾಯಿಯನ್ನು ಬೀದಿಗೆ ತಳ್ಳಿದ ಅಮಾನವೀಯ ಘಟನೆ ಸರ್ವೇ ಸಾಮಾನ್ಯವಾಗಿದೆ. ತನ್ನ ತಾಯಿಯು ಮನೆಯಿಂದ ಹೊರ ಹೋಗಲು ಕಾರಣನಾದ ಮಗ ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಮತ್ತೆ ಅವಳನ್ನು ಹುಡುಕಲು ಹೊರಟಾಗ ಹತ್ತಾರು ಕಡೆಯಲ್ಲಿ ಕಳೆದು ಹೋದ ತಾಯಂದಿರನ್ನು ಕಂಡು ಮರುಗುತ್ತಾರೆ. ತಾಯಿಯ ಮಹತ್ವ, ಅವಳ ಇರುವಿಕೆ ನಮಗೆಷ್ಟು ಅಗತ್ಯ ಮತ್ತು ಭಾವನಾತ್ಮಕ ಸಂಬಂಧದ ಆ ನೋವು ಅಸಹನೀಯವೆಂಬುದು ಕಳಕೊಂಡಾಗಲೇ ತಿಳಿಯುವುದು. ಕೊನೆಗೂ ತನ್ನ ತಾಯಿಯನ್ನು ಕಾಣಲು ಹೆಣಗಾಡುತ್ತಾ ಸಾಗುವ ಮಗನ ಯಾತನಾಮಯ ಬದುಕೇ ಆತನಿಗೆ ಶಿಕ್ಷೆಯಾಗಿ ಕಾಡುವ ಚಿತ್ರಣವನ್ನು “ಪರಂಪರೆ” ನಾಟಕದಲ್ಲಿ ಅಳವಡಿಸಲಾಗಿತ್ತು.

By suddi9

Leave a Reply

Your email address will not be published. Required fields are marked *