ಮಂಗಳೂರು: ಇಬ್ಬರು ಹೆಲ್ಮೇಟ್‌ಧಾರಿಗಳು ಬ್ಯಾಂಕ್‌ ದರೋಡೆಗೆ ಯತ್ನಿಸಿರುವ ಘಟನೆ ತಲಪಾಡಿ ಕೆಸಿ ರಸ್ತೆಯ ಕೋಟೆಕಾರು ವ್ಯವಸಾಯ ಸಂಘದ ಶಾಖೆಯಲ್ಲಿ ನಡೆದಿದೆ.ಹೆಲ್ಮೇಟ್‌ ಧರಿಸಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಚೂರಿ ತೋರಿಸಿ ಗೋಣಿಚೀಲದಲ್ಲಿ 5 ಕೆಜಿಯಷ್ಟು ಚಿನ್ನ ಎಗರಿಸಿ ಓಟ ಕೀಳುತ್ತಿದ್ದರು. ಈ ವೇಳೆ ಬ್ಯಾಂಕ್‌ ಸಿಬ್ಬಂದಿ ರಾಮಚಂದ್ರ ಎಂಬುವರು ದರೋಡೆಕೋರರಿಗೆ ಕಲ್ಲೇಟು ನೀಡಿ ಸಮಯಪ್ರಜ್ಞೆ ಮೆರೆದಿದ್ದಾರೆ.

ajt

ದಿಢೀರ್‌ ದಾಳಿಯಿಂದ ಕಕ್ಕಾಬಿಕ್ಕಿಯಾದ ದರೋಡೆಕೋರರು ಚಿನ್ನವನ್ನು ಅಲ್ಲೇ ಬಿಟ್ಟು ಕಪ್ಪು ಪಲ್ಸರ್‌ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿಸಿಪಿ ಹನುಮಂತರಾಯ ಮತ್ತು ಶೃತಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ

By Suddi9

Leave a Reply

Your email address will not be published. Required fields are marked *