ಬಂಟ್ವಾಳ ಮಾನವನ ವ್ಯಕ್ತಿತ್ವದ ಮಾನಸಿಕ ಹಾಗೂ ದೈಹಿಕ ವಿಕಸನದಲ್ಲಿ ಯೋಗದ ಪಾತ್ರ ಮಹತ್ತರವಾದುದು. ಶರೀರ ಮತ್ತು ಆತ್ಮವನ್ನು ಸಂಯೋಗಗೊಳಿಸುವ ಕೊಂಡಿಯಾಗಿ ಯೋಗವು ಕಾರ್ಯನಿರ್ವಹಿಸುತ್ತದೆ. ಮಾನಸಿಕ ಹಾಗೂ ದೈಹಿಕ ಕ್ಲೇಶಗಳನ್ನು ಹೋಗಲಾಡಿಸಿ ಏಕಾಗ್ರತೆ, ಶಾಂತಿ, ಸ್ವಾಸ್ಥ್ಯವನ್ನು ಕಂಡುಕೊಳ್ಳುವುದಕ್ಕೆ ಯೋಗದ ಮೊರೆ ಹೋಗಬೇಕು. ಆಧುನಿಕ ಒತ್ತಡದ ಬದುಕಿನ ವಿನ್ಯಾಸವು ಮನುಷ್ಯನಿಗೆ ಹಲವು ಬಗೆಯ ತೊಂದರೆಗಳನ್ನು ಉಂಟುಮಾಡುತ್ತಿದೆ.
ಶ್ರಮ ರಹಿತ ಜೀವನ ಕ್ರಮವು ಮನುಷ್ಯನಿಗೆ ಬೊಜ್ಜು, ಅಸ್ತಮಾ, ಮಧುಮೇಹ ಮೊದಲಾದ ಆರೋಗ್ಯಕ್ಕೆ ಸಂಬಂಧಿಸಿದ ರೋಗಗಳನ್ನು ತಂದೊಡ್ಡುತ್ತಿದೆ. ಮಾನವನ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಹದಗೆಡುವುದೇ ರೋಗದ ಲಕ್ಷಣ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಸದೃಢ ವ್ಯಕ್ತಿತ್ವವೂ ಅಗತ್ಯ. ವರ್ತಮಾನದ ಎಲ್ಲಾ ಸಮಸ್ಯೆಗಳಿಗೂ ಯೋಗದಲ್ಲಿ ಪರಿಹಾರವಿದೆ. ವಿದ್ಯಾರ್ಥಿಗಳು ತಮ್ಮ ಜೀವನ ವಿಕಸನಕ್ಕಾಗಿ ಯೋಗದ ಮೊರೆ ಹೋಗಬೇಕಾಗಿದೆ ಎಂದು ನಾರಾಯಣ ಆಯುರ್ವೇದಿಕ್ ಚಿಕಿತ್ಸಾ ಕೇಂದ್ರದ ವೈದ್ಯ ಡಾIಬಾಲಕೃಷ್ಣ ಕುಮಾರ್ ಎ., ಅಭಿಪ್ರಾಯಪಟ್ಟರು.

