ಮೂಡುಬಿದರೆ: ಏಕಮುಖ ಶಿಕ್ಷಣ ಅಘಾತಕಾರಿ ಬೆಳವಣಿಗೆ. ಶಿಕ್ಷಣವನ್ನು ಕೇವಲ ಅಂಕಗಳಿಗೆ ಸೀಮಿತವಾಗದೆ ವ್ತಕ್ತಿತ್ವ ಬೆಳಗಿಸುವ, ಜ್ಞಾನ ವೃದ್ಧಿಸುವ ಕೆಲಸವನ್ನು ಮಾಡಿದರೆ ನೈಜ್ಯ ಶಿಕ್ಷಣದ ವ್ಯವಸ್ಥೆ ಅನುಷ್ಠಾನಕ್ಕೆ ಬರುತ್ತದೆ. ಭಾವನೆಗಳ ಅನುಭವ. ಸೂಕ್ಷ್ಮತೆಗಳ ಗ್ರಹಿಕೆಯಾದಲ್ಲಿ ಪರಿಪೂರ್ಣ ವ್ಯಕ್ತಿತ್ವ ಮೂಡಲು ಸಾಧ್ಯ. ಮಾನವೀಯ ಮೌಲ್ಯಗಳನ್ನು ಅರಿತು ಬದುಕಿದರೆ ವ್ಯಕ್ತಿತ್ವ ಉತ್ತಮವಾಗಿರುತ್ತದೆ ಎಂದು
ಎಂದು ಕಲಾ ವಿಮರ್ಶಕ ಪ್ರೊ.ಈಶ್ವರಯ್ಯ ಹೇಳಿದರು.

ಆಳ್ವಾಸ್ ಕಾಲೇಜಿನ ಶೈಕ್ಷಣಿಕ ಸಂಘಗಳನ್ನು ಪ್ರೊ.ಈಶ್ವರಯ್ಯ ಉದ್ಘಾಟಿಸಿದರು.

mbd_july26_1
ಮೂಡುಬಿದರೆ ಆಳ್ವಾಸ್ ಕಾಲೇಜಿನ 31 ಶೈಕ್ಷಣಿಕ ಸಂಘಗಳನ್ನು ವಿದ್ಯಾಗಿರಿಯ ರತ್ನಾಕರವರ್ಣ ವೇದಿಕೆಯಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.  ಬದುಕಿನ ಬಗ್ಗೆ ನಿಖರ ಗುರಿ, ಸಾಕಾರಗೊಳಿಸುವ ಪ್ರಯತ್ನವಿರಬೇಕು. ನಡವಳಿಕೆಯ ಅನ್ವೇಷಣೆ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ನಮ್ಮಿಷ್ಟದ ಕ್ಷೇತ್ರದಲ್ಲಿ ಸಕ್ರಿಯರಾಗಿ, ಮಾಹಿತಿಯ ಸದುಪಯೋಗದೊಂದಿಗೆ ಸಾಗಿದರೆ ಸಾಧನೆ ಸಾಧ್ಯ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರತಿ ಸಂಘಗಳು ಕನಿಷ್ಠ 20 ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ಉತ್ತಮ ವ್ಯಕ್ತಿತ್ವದೊಂದಿಗೆ ಸಮರ್ಪಣೆ, ಒಮ್ಮತದ ಅಭಿಪ್ರಾಯ ಸಂಘ ಸಾಂಗವಾಗಿ ನಡೆಯಲು ಸಹಕಾರಿ. ಒಳ್ಳೆಯದನ್ನು ಕಟ್ಟುವ ಕೆಲಸವಾಗಬೇಕು. ಇಷ್ಟಪಟ್ಟು ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸಂಘದೊಂದಿಗೆ ನಾವು ಬದುಕಿನಲ್ಲಿ ಮುನ್ನಡೆಯುತ್ತೇವೆ
ಎಂದು ಅಭಿಪ್ರಾಯಪಟ್ಟರು.
ಸಂಘಗಳ ಕಾರ್ಯದರ್ಶಿಗಳಿಗೆ ಸಂಯೋಜಕಿ ಶರ್ಮಿಳಾ ಕುಂದರ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಜ್ವಲಿ ಸ್ವಾಗತಿಸಿದರು. ಯೋಗೀಶ್ ಕೈರೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನವಿಕ ಸಂಘದ ಜತೆ ಕಾರ್ಯದರ್ಶಿ  ಗೀತಾಂಜಲಿ ನಾಯಕ್ ಅತಿಥಿ ಪರಿಚಯ ಮಾಡಿದರು. ಪ್ರಣಮ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಗ್ಲೆಡಿಸ್ ವಂದಿಸಿದರು.

By suddi9

Leave a Reply

Your email address will not be published. Required fields are marked *