ಜೆಸಿಐ ಪರ್ಕಳ ಘಟಕದ ಜ್ಯೂನಿಯರ್ ಜೇಸಿ ಮತ್ತು ಜೇಸಿರೆಟ್ ವಿಭಾಗಗಳು ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ 11ನೇ ವರ್ಷದ ಯೂತ್ ಫೆಸ್ಟ್ – 2017 ನೇ  ಅಂಗವಾಗಿ  ಜೂ. 11 ರಂದು ಭಾನುವಾರ  ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾಮಟ್ಟದ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಬೆಳಗ್ಗೆ ಗಂಟೆ 9.30ಕ್ಕೆ ಚಿತ್ರಕಲಾ ಸ್ಪರ್ಧೆ (1ರಿಂದ 10 ತರಗತಿವರೆಗೆ ಮೂರು ವಿಭಾಗಗಳಲ್ಲಿ), ಮಧ್ಯಾಹ್ನ ಗಂಟೆ 11.00ಕ್ಕೆ ವಿಜ್ಞಾನ ಮಾದರಿಗಳ ಸ್ಪರ್ಧೆ (ಹೈಸ್ಕೂಲ್ ವಿದ್ಯಾರ್ಥಿಗಳಿಗೆ), ಗಂಟೆ 1.30ಕ್ಕೆ ಪ್ರತಿಭಾ ಪ್ರದರ್ಶನ (ವಿದ್ಯಾರ್ಥಿಗಳಿಗೆ), ಸಾರ್ವಜನಿಕರಿಗಾಗಿ ಗಂಟೆ 1.30ರಿಂದ ರಂಗೋಲಿ ಸ್ಪರ್ಧೆ, ಕೇಶಾಲಂಕಾರ, ಮೆಹಂದಿ ಸ್ಪರ್ಧೆ, 4.30ಕ್ಕೆ ಛದ್ಮವೇಷ ಸ್ಪರ್ಧೆ (ವಿದ್ಯಾರ್ಥಿಗಳಿಗಾಗಿ) ಮತ್ತು ಸಂಜೆ 5.30ರಿಂದ “ಡ್ಯಾನ್ಸ್ ಧಮಾಕಾ” (ನೃತ್ಯ ಸ್ಪರ್ಧೆ – 7 ಅಥವಾ 7ಕ್ಕಿಂತ ಹೆಚ್ಚಿನ ಸದಸ್ಯರ 8 ತಂಡಗಳಿಗೆ ಅವಕಾಶ). ಸ್ಪರ್ಧೆ ವಿಜೇತರಿಗೆ ವಿಶೇಷ ನಗದು ಪುರಸ್ಕಾರ/ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ತಿಳಿಸಿರುತ್ತಾರೆ
ಹೆಚ್ಚಿನ ವಿವರಗಳಿಗಾಗಿ : 70263 39888, 94482 52444 ಅಥವಾ 98808 52792 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

By Suddi9

Leave a Reply

Your email address will not be published. Required fields are marked *