ಬಂಟ್ವಾಳ: ಮೊಗರನಾಡು ಸಾವಿರ ಸೀಮೆಯ ಶ್ರೀಕ್ಷೇತ್ರ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಅನುಜ್ಙಾ ಕಲಶ ಸಹಿತ ಬಾಲಾಲಯ ಪ್ರತಿಷ್ಠೆ ಮತ್ತು ಪರಿವಾರ ದೇವರ ಪನರ್ ಪ್ರತಿಷ್ಠೆ ಜೂ.12 ರಿಂದ14 ರವರೆಗೆ ನಡೆಯಲಿದೆ. ವೇ.ಮೂ.ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಜೂ12 -13 ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. 14 ರಂದು ಶ್ರೀನಿಟಿಲಾಕ್ಷ ಸದಾಶಿವ ದೇವರ ಪರಿವಾರ ದೇವರುಗಳಾದ ಶ್ರೀ ಸಿದ್ದಿವಿನಾಯಕ,ಶ್ರೀ ಧರ್ಮಶಾಸ್ತ್ರ, ಶ್ರೀ ಕುಮಾರಿದೇವಿಯ ಪುನರ್ ಪ್ರತಿಷ್ಠೆಯು ಸುತ್ತುಪೌಳಿಯಲ್ಲಿನ ನೂತನ ಶಿಲಾಮಯ ಗುಡಿಯಲ್ಲಿ ನೆರವೇರಲಿದೆ.ಹಾಗೆಯೇ ಪ್ರಧಾನದೇವರಾದ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಗರ್ಭಗುಡಿಯ ಅನುಜ್ಙಾಕಲಶ ಮತ್ತು ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಜರಗಲಿದೆ ಭಕ್ತಾಧಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಬರಿಮಾರ್ ಹಾಗೂ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
