ಉಡುಪಿ: ಜೇಸಿಐ ಪರ್ಕಳ ಮತ್ತು ಉಡುಪಿ ಜಿಲ್ಲಾ ಕೃಷಿಕ ಸಂಘ ಇದರ ಆಶ್ರಯದಲ್ಲಿ ಜೂನ್ 1 ಗುರುವಾರ ಹೀರೆಬೆಟ್ಟು ಆರ್ಯ ದುರ್ಗಾ ಸಭಾ ಭವನದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಸಾಧಕ ರೈತರಿಗೆ ಅಭಿನಂದನಾ ಸಮಾರಂಭ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಸಿ ವಲಯಾದ್ಯಕ್ಷ ಸಂತೋಷ್ ಜಿ ,ಸರ್ಕಾರದಿಂದ ರೈತರಿಗೆ ಅನೇಕ ರೀತಿಯ ಸವಲತ್ತುಗಳಿವೆ ಇದರ ಉಪಯೋಗ ಮಾಡಿ ರೈತರು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು ಈ ನಿಟ್ಟನಲ್ಲಿ ಈ ರೀತಿಯ ಕಾರ್ಯಕ್ರಮ ವಲಯದಲ್ಲಿ ನಡೆಯುತ್ತಿದೆ ಎಂದರು.IMG_20170601_180018

ಕಾರ್ಯಕ್ರಮದ ಅದ್ಯಕ್ಷತೆಯನ್ನು ಪರ್ಕಳ ಜೇಸಿ ಅದ್ಯಕ್ಷೆ ಆಶಾ ಬಿ ವಹಿಸಿದ್ದರು.ತರಬೇತಿಯನ್ನು ಖ್ಯಾತ ಕೃಷಿಕರಾದ ಕುದಿ ಶ್ರೀನಿವಾಸ ಭಟ್ ನೆರವೇರಿಸಿದರು.ವೇದಿಕೆಯಲ್ಲಿ ವಲಯ ಕಾರ್ಯಕ್ರಮ, ನಿರ್ದೇಶಕ ಅನಿಲ್ ಕುಮಾರ್,ವಲಯ ಮಿಡಿಯಾ ಕವರೇಜ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು,ಗ್ರಾ.ಪಂ ಸದಸ್ಯ ಗುರುನಂದ ನಾಯಕ್ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ವಾಸುದೇವ ಲಾಗ್ವಂಕಾರ್ ರವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಲಯಾಧಿಕಾರಿ ಶ್ರೀನಿವಾಸ್ ಜಿ,ಬಾಬು ಪರ್ಕಳ,ಪಾಡುರಂಗ ನಾಯಕ್ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *