ಬಂಟ್ವಾಳ: ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಅಹಿತಕರ ಘಟನೆ ಗೆ ಸಂಬಂಧಿಸಿದಂತೆ ಮುಂದುವರಿದ ಭಾಗವಾಗಿ ತಾಲೂಕಿನಾದ್ಯಂತ ಶನಿವಾರ ಬೆಳಿಗ್ಗೆ ಯಿಂದ ಜೂನ್ 2 ರವರೆಗೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಎ.ಸಿ. ರೇಣುಕಾ ಪ್ರಸಾದ್ ಆದೇಶಿಸಿದ್ದಾರೆ.ಶುಕ್ರವಾರ ಮಧ್ಯಾಹ್ನ ನಮಾಝ್ ಮುಗಿಸಿ ಬರುತ್ತಿದ್ದ ಹಾಶಿರ್ ಎಂಬವರಿಗೆ ಕಾರಿನಲ್ಲಿ ಬಂದ ಯುವಕರ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿತ್ತು. ಈ ಘಟನೆಯಿಂದಪರಿಸರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿ ಮಧ್ಯಾಹ್ನದ ಬಳಿಕ ಕಲ್ಲಡ್ಕ ಪೇಟೆ ಯ ಒಂದು ಭಾಗದಲ್ಲಿ ಅಘೋಷಿತ ಬಂದ್ ಆಚರಿಸಿತ್ತು.ಪೊಲೀಸರ ಸರ್ಪಗಾವಲಿನಿಂದಾಗಿ ಸಂಜೆಯ ಹೊತ್ತಿಗೆ ಪರಿಸ್ಥಿತಿ ಮಾಮೂಲಿ ಸ್ಥಿತಿಗೆ ಮರಳಿತ್ತು.ಶನಿವಾರ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದು ಕೊಂಡವು.

ಈ ಸಂದರ್ಭದಲ್ಲಿ ಕಲ್ಲು ತೂರಲ್ಪಟ್ಟ ಹಿನ್ನೆಲೆಯಲ್ಲಿ ಮತ್ತೆ ಆತಂಕವನ್ನು ಅವರಿಸಿತು.ಆದರೂ ಹಿಂದೂ ಸಮುದಾಯಕ್ಕೆ ಸೇರಿದ ಕೆಲವರು ಅಂಗಡಿಗಳನ್ನು ತೆರೆದು ವ್ಯವಹಾರ ನಡೆಸುತ್ತಿದ್ದರು.ಈ ಹಂತದಲ್ಲಿ ಪೊಲೀಸರು ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲು ಮುಂದಾದರು.ಆಗ ಸ್ಥಳಗಾಗಮಿಸಿದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರು ಅಲ್ಲೆ ಮೊಕ್ಕಾಂ ಹೂಡಿದ್ದ ಎಸ್ ಪಿ ಭೂಷಣ್ ಬೊರಸೆ ಅವರೊಂದಿಗೆ ಮಾತುಕತೆ ನಡೆಸಿ ಸಾಕಷ್ಟು ಪೊಲೀಸ್ ಬಂದೋ ಬಸ್ತು ಏರ್ಪಡಿಸಿದ್ದರೂ.ವಿನಾಕಾರಣವಾಗಿ ಅಂಗಡಿ ಮುಂಗಟ್ಟು ಮುಚ್ಚಿಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಕಲ್ಲಡ್ಕದ ಕೆಳಗಿನ ಪೇಟೆಯಲ್ಲಿ ಅಂಗಡಿ ಮುಂಗಟ್ಟು ತೆರೆದಿತ್ತಾದರೂ ಜನರ ಓಡಾಟ ವಿರಳವಾಗಿತ್ತು.ಸಂಜೆ ವೇಳೆಗೆಕಲ್ಲಡ್ಕದ ಶನಿವಾರ ಸಂತೆ ಜನಸಂಚಾರವಿಲ್ಲದೆ ಬಿಕೋ ಅನ್ನಿಸಿತ್ತು.
ಇನ್ನೊಂದೆಡೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ಆರೋಪಿಗಳನ್ನು ಬಂಧಿಸುವಂತೆ ಕಲ್ಲಡದ ಮೇಲಿನಪೇಟೆಯಲ್ಲಿ ಬಂದ್ ನಡೆಸುವಂತೆ ಒತ್ತಾಯಿಸಿದರು ಈ ಸಂದರ್ಭ ಎರಡೂ ಕೋಮಿನ ಜನ ಪೇಟೆಯಲ್ಲಿ ಜಮಾಯಿಸಿ ಮತ್ತೆ ಆತಂಕ ತಲೆದೋರಲು ಕಾರಣವಾಯಿತು. ತಕ್ಷಣ ಸ್ಥಳದಲ್ಲಿದ್ದ ಜಿಲ್ಲಾ ಎಸ್ಪಿ ಭೂಷಣ್ ಜಿ ಬೊರಸೆ ನೇತೃತ್ವದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಎರಡೂ ಕಡೆಯವರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಅವಲೋಕನ ನಡೆಸುತ್ತಿದ್ದಾರೆ. ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಹೆಚ್ಚುವರಿ ಕೆಎಸ್ಆರ್ಪಿ ಪ್ಲಟೂನ್ಗಳನ್ನು ಕರೆಸಲಾಗಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಇದೀಗ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ.ಮುಂಜಾಗ್ರತಾ ಕ್ರಮವಾಗಿ ಬಿ.ಸಿ.ರೋಡಿನಲ್ಲೂ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.ಈ ನಡುವೆ ಘಟನೆಯ ವೇಳೆ ಸ್ಥಳದಲ್ಲಿಲ್ಲದ ಅಮಾಯಕರ ಮೇಲೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆಂದುಆರೋಪಿಸಲಾ ಗಿದೆ.
