ಮಂಗಳೂರು: ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಹೊಸ ಹೊಸ ತಂತ್ರಜ್ಞಾನಗಳ ಆವಿಶ್ಕಾರ ಮಾಡುವತ್ತ ಗಮನ ಹರಿಸಬೇಕು. ಇದನ್ನು ಸಾದಿಸಲು ತಮ್ಮನ್ನು ತಾವೇ ತೊಡಗಿಸಿಕೊಂಡು ಕಾರ್ಯ ಪ್ರವೃತ್ತರಾದರೆ ಸಾಕು, ಯಶಸ್ಸು ಖಂಡಿತ ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯೇನೆಪೊಯ ಯುನಿವರ್ಸಿಟಿ ರಿಜಿಸ್ಟ್ರಾರ್ ಆದ ಡಾ|| ಜಿ. ಶ್ರೀಕುಮಾರ್ ಮೆನನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 
ಅವರು ಪಿ.ಎ. ತಾಂತ್ರಿಕ ಮಹಾವಿದ್ಯಾಲಯ ಇದರ 17ನೇ ವಾರ್ಷಿಕೋತ್ಸವದಲ್ಲಿ ಇಂಜಿನಿಯರಿಂಗ್ ಕೋರ್ಸುಗಳನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಮತ್ತು ಎಂ.ಬಿ.ಎ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯಗಳನ್ನು ನೀಡಿ ಗೌರವಿಸಲಾಯಿತು ಮತ್ತು ಶಿಕ್ಷಣೇತರ, ಕಾಲೇಜು ಮತ್ತು ಅಂತರ್ ಕಾಲೇಜು ಕ್ರೀಡಾಕೂಟ ಮತ್ತು ವಿವಿಧ ಸಂಘಟನೆ ಚಟುವಟಿಕೆಯಲ್ಲಿ ಭಾಗವಹಿಸಿ ಸಾಧನೆಗೈದ ಸುಮಾರು 150 ವಿದ್ಯಾರ್ಥಿಗಳನ್ನು ಕೂಡಾ ಪುರಸ್ಕರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ|| ಅಬ್ದುಲ್ ಶರೀಫ್ 2016-17ನೇ ಸಾಲಿನ ವಾರ್ಷಿಕ ವರದಿಯನ್ನು ಸಲ್ಲಿಸಿದರು. ಪಿ.ಎ. ಎಜುಕೇಶನ್ ಟ್ರಸ್ಟಿನ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಡಾ|| ಆಂಟನಿ ಎ.ಜೆ. ವಿದ್ಯಾರ್ಥಿ ಕ್ಷೇಮಪಾಲಕರು ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪ್ರೊ .ಸರ್ಫ್ರಾಝ್ ಹಾಸಿಂ ಜೆ. ಇವರು ಸ್ವಾಗತಿಸಿ, ಉಪಪ್ರಾಂಶುಪಾಲರಾದ ಡಾ| ರಮೀಝ್ ರವರು ವಂದಿಸಿದರು.
ಸಭೆಯಲ್ಲಿ ಶ್ರಿಯುತ ಕೆ.ಎಮ್ ಹನೀಫ್ ಆಡಳಿತಾಧಿಕಾರಿಗಳು, ಡಾ| ಝಾಯಿದ್ ಅನ್ಸಾರಿ ಮುಖ್ಯಸ್ಥರು, ಸಂಶೋಧನಾ ವಿಭಾಗ, ಡಾ|| ಬೀರಾನ್ ಮೊಯ್ದಿನ್ ನಿರ್ದೇಶಕರು ಎಂ.ಬಿಎ ವಿಭಾಗ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಪ್ರೊ.ನಬೀಲ್ ಅಹಮದ್ ಪ್ರತಿಭಾಂತ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು. ಮೆಕ್ಯಾನಿಕಲ್ ವಿದ್ಯಾರ್ಥಿ ಆದಿಲ್ರವರು ಕಿರಾಹತ್ ಪಠಿಸಿ, ವಿದ್ಯಾರ್ಥಿಗಳಾದ ಅಬ್ದುಲ್ ಅಹದ್ ಷೇಕ್ ಮತ್ತು ಅಕ್ಷತ ಕಾರ್ಯಕ್ರಮವನ್ನು ನಿರೂಪಿಸಿದರು.
