ಮಂಗಳೂರು:ಗೋವಾದ ರಾಮನಾಥಿಯಲ್ಲಿ ಜೂನ್ 14ರಿಂದ 17ರವರೆಗೆ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನಡೆಯಲಿದ್ದು ಸನಾತನ ಹಿಂದೂ ಸಂಘಟನೆಯ ರಾಷ್ಟ್ರೀಯ ವೇದಿಕೆ ಅಧಿವೇಶನ ಆಯೋಜಿಸಿದೆ. ಕರ್ನಾಟಕದಿಂದ ಸುಮಾರು 50 ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು ದೇಶದ 25 ರಾಜ್ಯದಿಂದ ಸೇರಿ ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಿಂದ ಹಾಗೂ 250 ಸ್ಥಳೀಯ ಹಿಂದು ಸಂಘಟನೆಗಳು ಭಾಗವಹಿಸಲಿದೆ.
ಅಲ್ಲದೇ ದೇಶದ ಸಂಪ್ರದಾಯಿಕ, ಆಧ್ಯಾತ್ಮಿಕ ಸಂಸ್ಥೆಗಳು, ಹಿಂದುತ್ವವಾದಿ ವಕೀಲರು, ರಾಷ್ಟ್ರ ಧರ್ಮದ ಬಗ್ಗೆ ಕಾರ್ಯ ಮಾಡುವ ವಿಚಾರವಂತರು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯದ ಬಳಿಕ ಭಾರತ ದೇಶ ಜಾತ್ಯತೀತ ರಾಷ್ಟ್ರವಾಯಿತು. ಅಂಕಿ ಅಂಶದ ಪ್ರಕಾರ ಜಗತ್ತ್ತಿನಲ್ಲಿ ಕ್ರೈಸ್ತರ 157, ಮುಸಲ್ಮಾನರ 52, ಬೌದ್ಧರ 12 ಹಾಗೂ ಜ್ಯೂಗಳ 1 ರಾಷ್ಟ್ರವಿದೆ. 100 ಕೋಟಿಯಷ್ಟು ಜನಸಂಖ್ಯೆ ಇರುವ ಹಿಂದೂಗಳಿಗೆ ತಮ್ಮದೇ ಆದ ಒಂದು ರಾಷ್ಟ್ರವಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಪ್ರಥಮ ಬಾರಿ ಮಂಡಿಸಲಾದ ಹಿಂದೂ ರಾಷ್ಟ್ರದ ಸಂಕಲ್ಪನೆಯು ಮುಂದೆ ಸ್ವಾತಂತ್ರ್ಯದನಂತರ ಕಾಂಗ್ರೆಸ್ಸಿನ ಜಾತ್ಯತೀತ ರಾಜ್ಯ ಪದ್ಧತಿಯಲ್ಲಿ ಕರಗಿ ಹೋಯಿತು. ಕಾಂಗ್ರೆಸ್ ಮತಪೆಟ್ಟಿಗೆಯ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುವ ಹಾಗೂ ಅದರೊಂದಿಗೆ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ಭಾರತದಿಂದ ಸಂಪೂರ್ಣ ಉಚ್ಛಾಟನೆ ಮಾಡುವ ಏಕಪಕ್ಷೀಯ ಧ್ಯೇಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಇದರಿಂದ ಹಿಂದೂ ಮತ್ತು ಹಿಂದೂ ಧರ್ಮ ಇವುಗಳ ಸ್ಥಿತಿ ದಯನೀಯ ಪರಿಸ್ಥಿತಿ ತಲುಪಿದೆ ಎನ್ನುತ್ತಾರೆ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಗುರುಪ್ರಸಾದ.

22mng58

ಹಿಂದು ಸನಾತನ ಸಂಸ್ಥೆಯ ವತಿಯಿಂದ ಹಿಂದುತ್ವ ನಿಷ್ಠ ಸಂಘಟನೆಗಳಲ್ಲಿಯೂ ಹಿಂದೂ ರಾಷ್ಟ್ರದ ಸೆಳೆತ ನಿರ್ಮಾಣವಾಯಿತು. ಅದಕ್ಕಾಗಿ ಪರಸ್ಪರ ಬೇಟಿಯಾಗಿ ವಿಚಾರಮಂಥನ ಮಾಡುವುದು ಆವಶ್ಯಕವಾಯಿತು. 2012 ರಲ್ಲಿ ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರೀಯ ಹಿಂದೂ ಅಧಿವೇಶನ ಈ ಸಂಕಲ್ಪನೆ ಮಂಡಿಸಿತು. ಇದಕ್ಕೆ ಸಂಬಂಧವಾಗಿ ದೇಶದ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳ ಹಿಂದೂ ಅಧಿವೇಶನವನ್ನು ಪ್ರತಿವರ್ಷ ಗೋವಾದಲ್ಲಿ ನಡೆಸಲು ತೀರ್ಮಾನಿಸಿತು. ಈ ವರ್ಷ ಇದು ಅಧಿವೇಶನದ 6 ನೇ ವರ್ಷವಾಗಿದೆ. ಜೂನ್ 14 ರಿಂದ 17ರವರೆಗೆ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನಡೆಯಲಿದೆ. ನಂತರ ಜೂನ್ 19 ರಿಂದ 21 ರವರೆಗೆ ಹಿಂದೂ ರಾಷ್ಟ್ರ ಕಾರ್ಯಕರ್ತ ನಿರ್ಮಿತಿ ಅಧಿವೇಶನ ನಡೆಯಲಿದೆ.
ಭಾರತದ 25 ರಾಜ್ಯಗಳು ಹಾಗೂ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳಲ್ಲಿ ಕಾರ್ಯನಿರತ ಸಣ್ಣ-ದೊಡ್ಡ ಇಂತಹ 250 ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು ಈ ಸಲದ ಅಧಿವೇಶನದನಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಅಧಿವೇಶನದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳ ಮೇಲಿನ ಹಲ್ಲೆ, ದೌರ್ಜನ್ಯ, ಹಿಂದೂ ಸಮುದಾಯದ ಕುರಿತ ಸಂಕುಚಿತ ಮನೋಭಾವ ಮೊದಲಾದ ವಿಚಾರಗಳು ಚರ್ಚೆಯಾಗಲಿದೆ.

ಬಾಕ್ಸ್;
ಭಾರತದಲ್ಲಿ ಕಳೆದ 69 ವರ್ಷಗಳ ಕಾಲ ಧರ್ಮನಿರಪೇಕ್ಷತಾವಾದಿ ಪ್ರಜಾಪ್ರಭುತ್ವ ಆಡಳಿತವಿದೆ. ಯಾವುದೇ ಪಕ್ಷವೂ ಹಿಂದೂಗಳ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ. ಹಿಂದೂ ಧರ್ಮ ಮತಾಂಧರ ದಾಳಿಗಳನ್ನು ಎದುರಿಸಬೇಕಾಗಿದೆ. ಜಾತ್ಯತೀತ ಸರಕಾರದ ಆಡಳಿತದಲ್ಲಿ ಜಿಹಾದಿ, ಭ್ರಷ್ಟಾಚಾರಿ, ಬಲಾತ್ಕಾರಿ ಮುಂತಾದವರು ಸುಖವಾಗಿ ಬಾಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಜವಾದ ಹಿಂದೂಹಿತ ಕಾಯಲು ಹಿಂದೂ ರಾಷ್ಟ್ರ ಅನಿವಾರ್ಯ- ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಗುರುಪ್ರಸಾದ.

ಬಾಕ್ಸ್;
ಕಾಶ್ಮೀರದಲ್ಲಿ ಪಾಕ್‍ಬೆಂಬಲಿಸುವ ಹುರಿಯತ್‍ನವರು ಸುರಕ್ಷಿತ ಜೀವನ ನಡೆಸುತ್ತಿದ್ದಾರೆ. ಭಾರತ ಸ್ವತಂತ್ರವಾದರೂ ಕಾಶ್ಮೀರವು ಇಂದಿಗೂ 1 ಸಾವಿರ ವರ್ಷ ಇಸ್ಲಾಂ ಹೇರಿದ ಗುಲಾಮಗಿರಿಯಲ್ಲಿ ಜೀವನ ನಡೆಸುತ್ತಿದೆ. ಕ್ರಿಕೆಟ್‍ನಲ್ಲಿ ಪಾಕಿಸ್ತಾನ ಗೆದ್ದಾಗ ಅಲ್ಲಿ ಪಟಾಕಿ ಸಿಡಿಸಲಾಗುತ್ತದೆ. ವಾಸ್ತವದಲ್ಲಿ ಆಗಲೇ ಅಲ್ಲಿ ಇಸ್ಲಾಮಿಕ್ ಸ್ಟೇಟ್‍ನ ಆರಂಭವಾಗಿತ್ತು. ಕಾಶ್ಮೀರಿಯರ ರಕ್ಷóಣೆಗಾಗಿ ಹಗಲುರಾತ್ರಿ ಒಂದು ಮಾಡುವ ಭಾರತೀಯ ಸೈನಿಕ ಮೇಲೆ ಜಿಹಾದಿಗಳು ಕಲ್ಲು ತೂರುತ್ತಿದ್ದಾರೆ- ಗುರುಪ್ರಸಾದ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

By Suddi9

Leave a Reply

Your email address will not be published. Required fields are marked *