ಕೈಕಂಬ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಮೊದಲಿನ ಹಂತದ ಶ್ರೀದುರ್ಗಾಪರಮೇಶ್ವರಿ ಗರ್ಭಗುಡಿಯ ಶಿಲಾನ್ಯಾಸವು ಶುಕ್ರವಾರ ಬೆಳಗ್ಗೆ 8.14ರ ಮಿಥುನ ಲಗ್ನದಲ್ಲಿ ನೇರವೇರಿತು. ಪೊಳಲಿ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ಸುಬ್ರಹಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿಗಳು ಪೂಜಾವಿಧಿ ವಿಧಾನಗಳನ್ನು ನೆರವೇರಿಸಿದರು. ಪೊಳಲಿ ದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಕೆ.ರಾಮ ಭಟ್, ದೇವಳದ ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜ, ರಾಜ ಐತಾಳ್ ಇದ್ದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆ ಗುತ್ತು ಡಾ.ಮಂಜಯ್ಯ ಶೆಟ್ಟಿ, ಯು .ತಾರನಾಥ ಆಳ್ವ ಉಳಿಪಾಡಿಗುತ್ತು, ಚೇರಾ ಸೂರ್ಯನಾರಾಯಣ ರಾವ್, ಪೊಳಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಚಿವ ರಮಾನಾಥ ರೈ, ಉಪಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್,ಕೋಶಾಧಿಕಾರಿ ಪ್ರವೀಣ್, ರಾಜೇಶ್ ನಾಯಕ್ ಉಳಿಪಾಡಿಗುತ್ತು, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಚಿತ್ತರಂಜನ್ ರೈ ಕೃಷ್ಣರಾಜ ಮಾರ್ಲ,ರಘೂನಾಥ ಸೋಮಾಯಾಜಿ,ಜೀವರಾಜ ಶೆಟ್ಟಿ,ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಚಂದ್ರಶೇಖರ್ ಭಂಡಾರಿ, ಸುಬ್ರಾಯ ಕಾರಂತ,ಅರುಣ್ ಅಳ್ವ ಹಾಗೂ ವಾಸ್ತು ತಜ್ಙ ರಾದ ಮಹೇಶ್ ಮುನಿಯಂಗಳ್ ,ಕಟ್ಟಡದ ಉಸ್ತುವರಿ ವಹಿಸಿದ ಗಿರಿಧರ್ ಶೆಟ್ಟಿ, ಕೃಷ್ಣ ಕುಮಾರ್ ಪೂಂಜ, ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ, ದೇವ್ ದಾಸ್ ಹೆಗ್ಡೆ , ವೆಂಕಟೇಶ್ ನಾವಡ ಹಾಗೂ ಶಿಲ್ಪಿಗಳಾದ ಕುಪ್ಪು ಸ್ವಾಮಿ, ಮರದ ಶಿಲ್ಪಿಗಳಾದ ವಾಸು ಆಚಾರ್ಯ ಗುತ್ತಿಗೆದಾರ ಮಹಬಲ ಶೆಟ್ಟಿ, ವಸಂತ ಶೆಟ್ಟಿ ಮತ್ತು ದೇವಳದ ಭಕ್ತಾಧಿಗಳು ಉಪಸ್ಥಿತರಿದ್ದರು.





