ಮೂಡುಬಿದಿರೆ: ಅಂಬೇಡ್ಕರ್ ಅವರನ್ನು ಅವರ ಭಾವಚಿತ್ರಕ್ಕೆ ಹಾರಹಾಕುವುದಕ್ಕಷ್ಟೇ ಸೀಮಿತಗೊಳಿಸದೆ ಅವರ ಜೀವನಾದರ್ಶ ಹಾಗೂ ತತ್ವಚಿಂತನೆಗಳನ್ನು ಹಿಂದುಳಿದ ಸಮಾಜ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅಭಿವೃದ್ಧಿ ಸಾಧ್ಯ. ಪುಸ್ತಕ ಪ್ರಾಧಿಕಾರಗಳಿಂದ ಅಂಬೇಡ್ಕರ್ ಅವರ ಚಿಂತನೆಗಳನ್ನೊಳಗೊಂಡ ಪುಸ್ತಕಗಳ ರಾಶಿಯನ್ನು ವಿತರಣೆ ಮಾಡದೆ ಉದ್ದೇಶಪೂರ್ವಕವಾಗಿ ದಫನ ಮಾಡಲಾಗುತ್ತಿದೆ. ಗ್ರಂಥಾಲಯಗಳ ಮೂಲಕ ಅವರ ಚಿಂತನೆಗಳನ್ನು ಸಮಾಜದ ಹಿಂದುಳಿದ ವರ್ಗಕ್ಕೆ ತಲುಪಿಸಿದಲ್ಲಿ ಆ ಸಮಾಜಕ್ಕೆ ಅಂಬೇಡ್ಕರ್ ಆದರ್ಶಗಳು ದಾರಿದೀಪವಾಗಬಲ್ಲದು’ ಎಂದು ವಾರ್ತಾಭಾರತಿ ದೈನಿಕದ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.

ಅಂಬೇಡ್ಕರ್ ಅಭಿವೃದ್ಧಿ ಸಂಘ ಗೌತಮ್‍ನಗರ ಇದರ ಆಶ್ರಯದಲ್ಲಿ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಹಾಗೂ ಪುತ್ತಿಗೆ ಸಹೋದರರಿಂದ ಗೌತಮ್‍ನಗರ ಕಾನದಲ್ಲಿ ನಿರ್ಮಿಸಲಾಗಿರುವ ದಿ. ಮೌಲಾನ ಇ.ಎಂ. ಶಾಫಿ ಅಧ್ಯಯನ ಕೇಂದ್ರ ಹಾಗೂ ಗ್ರಂಥಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

mbd_may10_4 (1)
ಲೋಕಾಯುಕ್ತ ಎಸ್‍ಪಿ ಅಬ್ದುಲ್ ಅಹದ್ ಪುತ್ತಿಗೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಸರಕಾರಿ ಉದ್ಯೋಗಗಳ ಬಗ್ಗೆ ಕರಾವಳಿಯ ಜನರಲ್ಲಿ ಅದರಲ್ಲೂ ದಲಿತ ಸಮಾಜದಲ್ಲಿ ಹಿಂಜರಿಕೆ ಹೆಚ್ಚುತ್ತಿದೆ. ಸಾಕಷ್ಟು ವಿದ್ಯಾಭ್ಯಾಸವಿದ್ದು ಕೂಡಾ ಸರಕಾರಿ ಕೆಲಸ ಅಥವಾ ಐಎಎಸ್, ಕೆಎಎಸ್, ಪೊಲೀಸ್ ಇಲಾಖೆಗಳಿಗೆ ಸೇರಲು ಉತ್ಸಾಹ ಕಂಡುಬರುತ್ತಿಲ್ಲ. ಇದಕ್ಕೆ ಅರಿವು ಹಾಗೂ ಮಾರ್ಗದರ್ಶನದ ಕೊರತೆ ಪ್ರಮುಖ ಕಾರಣ. ಈ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರಕ್ಕೋಸ್ಕರ ಸರಕಾರಿ ಉದ್ಯೋಗಗಳ ಮಾರ್ಗದರ್ಶನ ನೀಡುವಂತಹ ಪುಸ್ತಕಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳಲಾಗಿದೆ. ಅದನ್ನು ಸ್ಥಳೀಯರು ಉಪಯೋಗಿಸಿಕೊಂಡು ಯಶಸ್ಸು ಸಾಧಿಸುವಂತಾಗಬೇಕು’ ಎಂದರು.mbd_may10_4 (2)

ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ದಾಸಪ್ಪ ಎಡಪದವು, ರುಖಿಯಾ ಶಾಫಿ ಪುತ್ತಿಗೆ, ಗ್ರಾ.ಪಂ. ಸದಸ್ಯರಾದ ಪ್ರಕಾಶ್ ಭಂಡಾರಿ, ಫ್ಲೋರಿನ್ ಡಿಸೋಜಾ, ಬೆಳುವಾಯಿ ಗ್ರಾ.ಪಂ. ಮಾಜಿ ಸದಸ್ಯ ಬಾಬು ಎಸ್. ಕಾನ, ಪ್ರಗತಿಪರ ಕೃಷಿಕ ಉದಯ ದೇವಾಡಿಗ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಶಶಿಕಾಂತ, ಬೆಳುವಾಯಿ ಗ್ರಾ.ಪಂ. ಮಾಜಿ ಸದಸ್ಯ ಅನೀಶ್ ಡಿಸೋಜಾ, ಸಿಪಿಐಎಂ ಮುಖಂಡ ಯಾದವ ಶೆಟ್ಟಿ, ಕಾರ್ಮಿಕ ಮುಖಂಡ ಶಂಕರ ವಾಲ್ಪಾಡಿ, ಚಂದ್ರಶೇಖರ್ ಕಾನ, ಕಟೀಲು ದುರ್ಗಾಪರಮೇಶ್ವರಿ ಕಾಲೇಜಿನ ಪ್ರಾಂಶುಪಾಲ ಸೋಮಪ್ಪ ಅಲಂಗಾರು ಉಪಸ್ಥಿತರಿದ್ದರು. ಜಗನ್ನಾಥ್ ಸ್ವಾಗತಿಸಿದರು. ಶಶಿರೇಖ ನಿರೂಪಿಸಿದರು. ರಮೇಶ್ ವಂದಿಸಿದರು.

By Suddi9

Leave a Reply

Your email address will not be published. Required fields are marked *