ಕೈಕಂಬ: ನೀರುಮಾರ್ಗ ದೇವಸ ಕುಲಾಲ್ ಕುಟುಂಬಿಕರ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವದ ಧಾರ್ಮಿಕ ಕಾರ್ಯಕ್ರಮ ಎ. 27 ರಂದು ಗುರುವಾರ ಬಿಸಿರೋಡ್ ಶ್ರೀ ರಕ್ತೇಶ್ವರೀ ದೇವಸ್ತಾನದ ವಠಾರದಿಂದ ಹೊರೆಕಾನಿಕೆ ಮೆರವಣಿಗೆಯು ಬೆಳಗ್ಗೆ 11.30 ಗಂಟೆಗೆ ಹೊರಡಲಿದೆ. ಬೆಳಗ್ಗೆ ಋ ತ್ವಿಜರ ಸ್ವಾಗತ , ಪ್ರಾರ್ಥನೆ, ಸ್ವಸ್ತಿಪುಣ್ಯಾಹ ದೇವನಾಂದಿ, ಆದ್ಯ ಗಣಯಾಗ ,ಸಪ್ತಶುದ್ಧಿ, ತೋರಣ ಮೂಹೂರ್ತ, ಉಗ್ರಾಣ ಮುಹೂರ್ತ, ಪ್ರಸಾದ ವಿತರಣೆ ಸಾಯಾಂಕಾಲ ಗಂಟೆ 6 ರಿಂದ ಪ್ರಾಸಾದಶುದ್ಧಿ, ವಾಸ್ತು ಪೂಜೆ, ವಾಸ್ತುಬಲಿ, ವಾಸ್ತು ಹೋಮ, ರಕ್ಷಾಸುದರ್ಶನ, ಹೋಮಪ್ರಾಕಾರಬಲಿ, ಕೂಪಶಾಂತಿ,ಪ್ರಸಾದ ವಿತರಣೆ ಜರುಗಲಿದೆ.
