ಬಂಟ್ವಾಳ: ಕಳೆದ ಮೂರು-ನಾಲ್ಕು ವರ್ಷಗಳಿಂದೀಚೆಗೆ ಅನಂತಾಡಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕೆಲಸಗಳಾಗಿದ್ದು, ಕ್ಷೇತ್ರದ ಶಾಸಕರಾದ ಶ್ರೀ ಬಿ.ರಮಾನಾಥ ರೈ ರವರು ಈ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಕಾರಣರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೂತ್ ಮತ್ತು ವಲಯ ಮಟ್ಟದಲ್ಲಿ ಸಂಘಟಿಸುವ ಕೆಲಸ ನಿರಂತರವಾಗಿ ನಡೆದಿದ್ದು ಕಾಂಗ್ರೆಸ್ ಪಕ್ಷದ ಇತಿಹಾಸ , ಕಾಂಗ್ರೆಸ್ ಮಾಡಿರತಕ್ಕಂತಹ ಕ್ರಾಂತಿಕಾರಿ ಕಾಯಿದೆಗಳು ಕರ್ನಾಟಕ ಘನ ಸರಕಾರದ ಮುಖ್ಯಮಂತ್ರಿಗಳಾದ ಬಿ.ಸಿದ್ದರಾಮಯ್ಯನವರ ಬಡವರ ಬಗ್ಗೆ ಜನಪರ ಕಾಳಜಿಯಿಂದ ಮಾಡಿರತಕ್ಕ ಕೆಲಸಗಳು, ಕ್ಷೇತ್ರದ ಶಾಸಕರು , ಮಂತ್ರಿಗಳಾದ ಬಿ.ರಮಾನಾಥ ರೈ ಯವರ ಅಭಿವೃದ್ಧಿ ಸಾಧನೆಗಳು ಮತ್ತು ಸೌಹಾರ್ದಯುತ ಸಮಾಜಕ್ಕಾಗಿ ಅವರ ಪ್ರಯತ್ನವನ್ನು ಕ್ಷೇತ್ರದ ಜನತೆಗೆ ತಿಳಿಸುವ ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ನಿಜವಾದ ಆಸ್ತಿ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಯವರು ಅನಂತಾಡಿ ವಲಯ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

DSC_0125
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಂ.ತಾಲೂಕು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ ಯವರು ಕಾಂಗ್ರೆಸ್ ಪಕ್ಷದ ಋಣ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದ್ದು ಪಕ್ಷ ಸಂಘಟಿಸುವ ಮುಖಾಂತರ ಜನಪರ ಕೆಲಸ ಮಾಡಬೇಕೆಂದರು ಮತ್ತು ಸ್ಥಳೀಯ ಜಿಲ್ಲಾ ಪಂ. ಸದಸ್ಯರು ಮಾಡಿದ ಅಭಿವೃದ್ಧಿ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ , ವಲಯ ಕಾಂಗ್ರೆಸ್ ಅಧ್ಯಕ್ಷ ರಾದ ಸತೀಶ್ ಪೂಜಾರಿ ಉಪಸ್ಥಿತರಿದ್ದರು. ನಾರಾಯಣ ಸಾಲ್ಯಾನ್ ಪ್ರಸ್ತಾವಿಕವಾಗಿ ಮಾತನಾಡಿ ಸತೀಶ್ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *