ಬಿ.ಸಿ.ರೋಡು:ಯಕ್ಷಲೋಕ ಸಾಂಸ್ಕೃತಿಕ ಸಂಗಮ ಮತ್ತು ಜೀವನ ಕೌಶಲ್ಯ ತರಬೇತಿ ಕೇಂದ್ರದ ಆಶ್ರಯದಲ್ಲಿ ಬಿ.ಸಿ.ರೋಡು ರಾಜರಾಜೇಶ್ವರೀ ಕಾಂಪ್ಲೆಕ್ಸ್‍ನಲ್ಲಿ ಮಕ್ಕಳಿಗಾಗಿ ಒಂದು ವಾರ ನಡೆದ “ಮೆಲು ದನಿ” ಸಂಗೀತ ಮತ್ತು ರಂಗಕಲೆ ಶಿಬಿರ ಶುಕ್ರವಾರ ಸಮಾಪನಗೊಂಡಿತು. ನ್ಯಾಯವಾದಿ ಶ್ರೀನಿವಾಸ ದೈಪಲ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದರು. ಯಕ್ಷಲೋಕ ನಿರ್ದೇಶಕ ಗೋಪಾಲ ಅಂಚನ್, ಅರಿವು ಯುವ ಸಂವಾದ ಕೇಂದ್ರದ ನಿರ್ದೇಶಕ ನಾದ ಮಣಿನಾಲ್ಕೂರು, ಕಲಾವಿದರಾದ ಯಶವಂತ ಸ್ನೇಹಗಿರಿ, ಲೋಲಾಕ್ಷ ನೆತ್ತರಕೆರೆ, ಶಿಬಿರ ಸಂಯೋಜಕಿ ಪ್ರತಿಮಾ ಜಿ.ಅಂಚನ್ ಹಾಗೂ ಮಕ್ಕಳ ಪೋಷಕರು ಭಾಗವಹಿಸಿದ್ದರು. ಮಕ್ಕಳಿಂದ ಹಾಡುಗಾರಿಕೆ, ನೃತ್ಯರೂಪಕ, ಪ್ರಹಸನ, ನಾಟಕ ಪ್ರದರ್ಶನ ನಡೆಯಿತು.

