ಸುದ್ದಿ9 ಕೈಕಂಬ: ಇತ್ತಿಚೇಗೆ ದಿನೆ ದಿನೆ ಅತ್ಯಾಚಾರ ,ಲೈಂಗಿಕ ದೌರ್ಜನ್ಯ ಕೊಲೆ ಸುಳಿಗೆಗಳು ಹೆಚ್ಚುತ್ತಿದ್ದು ಜು.21ರಂದು ಸೋಮವಾರ ದಕ್ಷಿಣಕನ್ನಡದ ಮಂಗಳೂರು ತಾಲೂಕಿನ ವಾಮಂಜೂರಿನ ಕಾಲೇಜು ಒಂದರಲ್ಲಿ ಇಂತಹದೇ ಘಟನೆ ಮರುಕಳಿಸಿದೆ. ಸೊಮವಾರ ವಿದ್ಯಾರ್ಥಿನಿ ಶಾಲೆಗೆ ಹೊರಟವಳು ಸಂಜೆ ಶಾಲೆಯಿಂದ ತರಗತಿ ಮುಗಿಸಿ ನೇರ ಮನೆಗೆ ಬಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ . ಪ್ಯಾನಿಗೆ ನೇಣು ಬಿಗಿದು ಅತ್ಮಹತ್ಯೆಗೆ ಯತ್ನಿಸುವುದನ್ನು ಕಂಡ ತನ್ನ ಸೋದರ ಮಾವ ಆಕೆಯನ್ನು ಪಾರುಮಾಡಿ ಆಕೆಯಲ್ಲಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂತು . ಸೋದರ ಮಾವ ಸ್ಥಳಿಯ ಯುವಕರಿಗೆ ವಿಷಯ ತಿಳಿಸಿದಾಗ ವಿಷಯ ಗಂಬೀರವಾದ ಕಾರಣ ಕಂಪ್ಲೆಂಡ್ ಮಾಡಲು ತಿಳಿಸಿದರು . ಕದ್ರಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಇಂತಹದೇ ಹಲವು ಪ್ರಕರಣಗಳು ನಡೆಯುತ್ತದೆ ಮುಗ್ದ ಹೆಣ್ಣು ಮಕ್ಕಳ ಭವಿಷ್ಯವನ್ನು ಹಾಳು ಮಾಡುವ ಪ್ರಕರಣಗಳು ಮರುಕಳಿಸದಂತೆ ಅಪರಾದಿಯನ್ನು ಕೂಡಲೇ ಬಂದಿಸಿ ಕಾನೂನು ಕ್ರಮ ಜರಗಿಸಬೇಕೆಂದು ಸ್ಥಳೀಯ ಸಂಘಟನೆಗಳು ಒತ್ತಾಯಿಸಿದೆ.
